ರಶ್ಮಿಕಾನೇ ಬೇಕು! ರಾಮ್​ಚರಣ್​ ಕಡೆಯಿಂದ ಹೀಗೊಂದು ಸಲಹೆ

Rashmika
Published on

ರಶ್ಮಿಕಾ ಇತ್ತೀಚಿನ ದಿನಗಳಲ್ಲಿ ಒಂದರಹಿಂದೊಂದು ಹಲವು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ ಸ್ಟಾರ್ ನಟರ ಸಿನಿಮಾಗಳೆಂದರೆ, ರಶ್ಮಿಕಾ ಮಂದಣ್ಣ ಹೆಸರು ಮೊದಲು ಕೇಳಿಬರುತ್ತದೆ. ಈಗ ಕಾಲಿವುಡ್ ನಟ ವಿಜಯ್ ಮತ್ತು ಟಾಲಿವುಡ್ ಸ್ಟಾರ್ ನಟ ರಾಮ್​ಚರಣ್​ ತೇಜ ಅಭಿನಯದ ಹೊಸ ಚಿತ್ರಗಳಿಗೂ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಶಂಕರ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ರಾಮ್ರಣ್ ತೇಜ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾರನ್ನು ನಾಯಕಿಯನ್ನಾಗಿ ಆಯ್ದುಕೊಳ್ಳುವಂತೆ ಸ್ವತಃ ರಾಮ್​ಚರಣ್​ ಸಲಹೆ ನೀಡಿದ್ದಾರಂತೆ. ಈಗಾಗಲೇ ರಶ್ಮಿಕಾ ಜತೆಗೆ ಒಂದು ಹಂತದ ಮಾತುಕತೆಯೂ ಆಗಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ನಟಿಸುತ್ತಾರಾ ಇಲ್ಲವಾ ಎಂಬುದು ಮುಂದಿನ ದಿನಗಳಲ್ಲಿ ಅಧಿಕೃತವಾಗಲಿದೆ. ಇತ್ತ ತಮಿಳಿನ ‘ದಳಪತಿ’ ವಿಜಯ್ ಚಿತ್ರದಲ್ಲಿಯೂ ರಶ್ಮಿಕಾ ಹೀರೋಯಿನ್ ಎಂಬ ಮಾತು ಕೇಳಿಬರುತ್ತಿದೆ. ವಿಜಯ್ ನಟನೆಯ 65ನೇ ಚಿತ್ರಕ್ಕೆ ರಶ್ಮಿಕಾ ಜತೆಗೆ ಕಿಯಾರಾ ಅಡ್ವಾಣಿ, ಪೂಜಾ ಹೆಗ್ಡೆ ಹೆಸರೂ ಸಹ ಕೇಳಿಬರುತ್ತಿದ್ದು, ಇವರೆಲ್ಲರ ಪೈಕಿ ರಶ್ಮಿಕಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ನೆಲ್ಸನ್ ದಿಲೀಪ್​ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗಲಿದ್ದು, ಸನ್ ಪಿಕ್ಚರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಏಪ್ರಿಲ್ ವೇಳೆಗೆ ಚಿತ್ರದ ಶೂಟಿಂಗ್ ಶುರುವಾಗಲಿದ್ದು, 2022ರ ಪೊಂಗಲ್​ಗೆ ಚಿತ್ರ ಬಿಡುಗಡೆ ಮಾಡುವುದು ತಂಡದ ಪ್ಲಾನ್. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net