More

    ಹೆಚ್ಚುತ್ತಿರುವ ಕರೊನಾ: ಮತ್ತೆ ಸೀಲ್​ಡೌನ್ ಸುಳಿಯಲ್ಲಿ ಮುಂಬೈ ನಗರಿ

    ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕ ಮನೆ ಮಾಡಿದ್ದು, ಅಮರಾವತಿಯಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆಯೂ ಆದೇಶವನ್ನು ಹೊರಡಿಸಿದ್ದು ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

    ಮುಂಬೈನ ಯಾವುದೇ ಮನೆ, ಅಪಾರ್ಟಮೆಂಟ್​ನಲ್ಲಿ 5 ಕ್ಕಿಂತ ಹೆಚ್ಚು ಕರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾದರೆ ಆ ಮನೆ ಅಥವಾ ಅಪಾರ್ಟಮೆಂಟ್​ನ್ನು ಸೀಲ್​ಡೌನ್ ಮಾಡಲಾಗುತ್ತದೆ ಎಂದು ಬಿಎಂಸಿ ತಿಳಿಸಿದೆ.

    ಅಮರಾವತಿ ಜಿಲ್ಲೆಯಲ್ಲಿ ಫೆ 22 ರ ಮುಂಜಾನೆ 7 ಗಂಟೆಯವರೆಗೂ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ತಗ್ಗಿತ್ತು. ಆದರೆ, ಇದೀಗ ಕೆಲ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಇದ್ದಕ್ಕಿಂತೆ ಹೆಚ್ಚಾಗುವುದು ಕಂಡು ಬರುತ್ತಿದೆ. ಅಮರಾವತಿ ಜಿಲ್ಲೆಯಲ್ಲಿ ಪ್ರತಿದಿನ 70 ಹೊಸ ಕರೊನಾವೈರಸ್ ಪ್ರಕರಣಗಳು ಕಂಡು ಬರುತ್ತಿವೆ.

    ಹೆಚ್ಚುತ್ತಿರುವ ಕೊರೊನಾವೈರಸ್ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮತ್ತೆ ಲಾಕ್​ಡೌನ್ ಜಾರಿಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಜನರು ಲಾಕ್​ಡೌನ್ ತಪ್ಪಿಸಬೇಕಾದರೆ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ. (ಏಜೇನ್ಸಿಸ್)

    ಪ್ರಿಯಾಂಕಾಳ ಹಳೆ ಮನೆಗೆ ಜಾಕ್ವೆಲಿನ್​ ಕಟ್ಟುತ್ತಿರುವ ಬಾಡಿಗೆ ಎಷ್ಟು ಗೊತ್ತೇ?! ಅಂತದ್ದೇನಿದೆ ಆ ಮನೆಯಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts