

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ವಾಸವಿದ್ದ ಮನೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಶಿಫ್ಟ್ ಆಗಿದ್ದಾರೆ. ಶ್ರೀಲಂಕಾದಿಂದ ಬಮದು ಬಾಲಿವುಡ್ನಲ್ಲಿ ಹಂಗಾಮ ಎಬ್ಬಿಸಿರುವ ಜಾಕ್ವೆಲಿನ್ ಆ ಮನೆಗೆ ಎಷ್ಟು ಬಾಡಿಗೆ ಕಟ್ಟುತ್ತಿದ್ದಾರೆ ಗೊತ್ತೇ?
ಮುಂಬೈನ ಜುಹುವಿನ ಕರ್ಮಯೋಗ್ ಸಿಎಚ್‌ಎಸ್‌ನಲ್ಲಿ ಈ ಹಿಂದೆ ಪ್ರಿಯಾಂಕಾ ವಾಸವಿದ್ದ ಮನೆಯನ್ನು ಜಾಕ್ವೆಲಿನ್ ಬಾಡಿಗೆಗೆ ಪಡೆದಿದ್ದಾರೆ. ಕಟ್ಟಡದ ನಾಲ್ಕು ಮತ್ತು ಐದನೇ ಫ್ಲೋರ್ ಅನ್ನು ಬಾಡಿಗೆ ಪಡೆದಿದ್ದಾರೆ ಎನ್ನುವ ಮಾಹಿತಿಯಿದೆ. ಅದರಲ್ಲಿ ಐದು ಬೆಡ್ ರೂಂ ಇದ್ದು, ಸಮುದ್ರಕ್ಕೆ ಅಭಿಮುಖವಾಗಿ ಬಾಲ್ಕನಿ ಇದೆ. ಮೂರು ವರ್ಷದ ಮಟ್ಟಿಗೆ ಅದೇ ಮನೆಯಲ್ಲಿ ಜಾಕ್ವೆಲಿನ್ ಇರಲಿದ್ದಾರೆ ಎನ್ನಲಾಗಿದೆ. ಈ ಎರಡು ಮಹಡಿಗೆ ತಿಂಗಳಿಗೆ ಬರೋಬ್ಬರಿ 6.78 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರಂತೆ ಜಾಕ್ವೆಲಿನ್.
ಜಾಕ್ವೆಲಿನ್ ಈ ವರ್ಷ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಕೃತಿ ಸನೋನ್ ಜತೆಯಲ್ಲಿ ಬಚ್ಚನ್ ಪಾಂಡೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜತೆ ಭೂತ್ ಪೊಲೀಸ್ ಸಿನಿಮಾದ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ನೊಂದಿಗೆ ಕಿಕ್ 2 ಸಿನಿಮಾ ಮಾಡಲಿದ್ದಾರೆ. ರೋಹಿತ್ ಶೆಟ್ಟಿ ಅವರ ಸರ್ಕಸ್ ಚಿತ್ರದಲ್ಲಿಯೂ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)