'ಸುಶಾಂತ್​ ಸಿಂಗ್​ ಕೇಸ್​ನಂತೇ ಇದೆ ನನ್ನ ಕೇಸ್​' ಲೈವ್​ ವಿಡಿಯೋ ಹರಿಬಿಟ್ಟ ನಟ; ನಟಿ ಮೇಲೆ ಗಂಭೀರ ಆರೋಪ

kesari
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​​ ಆತ್ಮಹತ್ಯೆ ಪ್ರಕರಣಕ್ಕೆ ಹಲವು ತಿಂಗಳುಗಳು ಕಳೆದಿವೆ. ಇದೀಗ ಸುಶಾಂತ್​ ಸಿಂಗ್​ನಂತೆಯೇ ತನಗೂ ಸಿನಿಮಾ ಇಂಡಸ್ಟ್ರಿಯಿಂದ ಸಾಕಷ್ಟು ನೋವಾಗುತ್ತಿರುವುದಾಗಿ ನಟರೊಬ್ಬರು ಆರೋಪಿಸಿದ್ದಾರೆ. ನನ್ನನ್ನೂ ಸಾವಿಕ ಕೂಪಕ್ಕೆ ತಳ್ಳಲು ನೋಡಲಾಗುತ್ತಿದೆ ಆದರೆ ನಾನು ಗಟ್ಟಿಯಿದ್ದೇನೆ, ಸಮಸ್ಯೆಯನ್ನು ಗೆದ್ದು ನಿಲ್ಲುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಭೋಜ್‌ಪುರಿ ನಟ ಕೇಸರಿ ಲಾಲ್ ಯಾದವ್ ಈ ರೀತಿಯ ಆರೋಪ ಮಾಡಿರುವ ನಟ. ಸಿನಿಮಾ ಕ್ಷೇತ್ರದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆಯಂತೆ. ಅವರನ್ನು ಕರೊನಾ ಪಾಸಿಟಿವ್​ ರೀತಿಯಲ್ಲಿ ನೋಡಲಾಗುತ್ತಿದೆಯಂತೆ. ಸುಶಾಂತ್​ ಸಿಂಗ್​ ಅವರ ಊರಿನವನೇ ಆದ ನನ್ನನ್ನು ಅದೇ ರೀತಿಯಲ್ಲೇ ನಡೆಸಿಕೊಳ್ಳಲಾಗುತ್ತಿದೆ. ಆದರೆ ನಾನು ಮೃದು ಸ್ವಭಾವದವನು ಅಲ್ಲ. ನಾನು ಗಟ್ಟಿ ಹೃದಯದವನು. ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ ಎಂದು ಅವರು ಫೇಸ್​ಬುಕ್​ ಲೈವ್​ ವಿಡಿಯೋದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಕೇಸರಿ ಲಾಲ್​ ನಟಿ ಕಾಜಲ್ ರಾಘವಾನಿ ಮೇಲೆ ಗಂಭೀರ ಆರೋಪ ಮಾಡಿದ್ದರು. ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದರು. ಅದಕ್ಕೆ ಉತ್ತರಿಸಿದ್ದ ಕಾಜಲ್​, ಕೇಸರಿ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುತ್ತಿದ್ದಾನೆ. ನಾನೂ ಸಂದರ್ಶನಗಳನ್ನು ಕೊಡುತ್ತೇನೆ ಆದರೆ ಮೋಸ ಮಾಡಿದ್ದಾರೆ ಎಂದು ಆರೋಪಗಳನ್ನು ಮಾಡುತ್ತಾ ಕೂರುವುದಿಲ್ಲ ಎಂದು ಹೇಳಿದ್ದರು.

ಲೈವ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

ಇಂದು ಫೇಸ್​ಬುಕ್​ ಲೈವ್​ ಬಂದ ಕೇಸರಿ, ಕಾಜಲ್​ ಹೆಸರು ತೆಗೆಯದೆಯೇ ಅವರನ್ನು ನಿಂದಿಸಿದ್ದಾರೆ. ಜಗಳ ಆಡುವುದನ್ನು ಬಿಟ್ಟು ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net