ದೀಪಾವಳಿಗೆ ಶುಭಕೋರಿದ 'ಆರ್​ಆರ್​ಆರ್​'

RRR - Final
Published on

ಹೈದರಾಬಾದ್​: ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್' ಚಿತ್ರದ ಚಿತ್ರೀಕರಣ ಮುಂದುವರೆಯುವುದು ಯಾವಾಗ? ಚಿತ್ರೀಕರಣಕ್ಕೆ ಆಲಿಯಾ ಭಟ್​ ಬರುತ್ತಾರಾ? ಚಿತ್ರದ ಬಿಡುಗಡೆ ಯಾವಾಗ? ಇಂಥ ಪ್ರಶ್ನೆಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದವು.

ಈಗ ಚಿತ್ರತಂಡದಿಂದ ಬೇರೆಯದೇ ಸುದ್ದಿ ಬಂದಿದೆ. ಚಿತ್ರತಂಡದವರು ಸೆಟ್​ನಲ್ಲೇ ದೀಪಾವಳಿ ಹಬ್ಬವನ್ನು ಆಚರಿಸಿರುವುದಷ್ಟೇ ಅಲ್ಲ, ಸಮಸ್ತ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

'ಆರ್​ಆರ್​ಆರ್​' ನಿರ್ದೇಶಕ ಎಸ್​.ಎಸ್​. ರಾಜಮೌಳಿ, ನಟರಾದ ಜ್ಯೂನಿಯರ್​ ಎನ್​ಟಿಆರ್​, ರಾಮ್​ಚರಣ್​ ತೇಜ ಮುಂತಾದವರು ಸೆಟ್​​ನಲ್ಲಿ ಸಂಭ್ರಮಿಸುತ್ತಿರುವ ಕೆಲವು ಫೋಟೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಫೋಟೋಗಳಲ್ಲಿ ಮೂವರು ಸಾಂಪ್ರಾದಾಯಿಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

'ಆರ್‌ಆರ್‌ಆರ್‌' ಚಿತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​, ರಾಮ್​ಚರಣ್​ ತೇಜ, ಆಲಿಯಾ ಭಟ್​, ಅಜಯ್​ ದೇವಗನ್​, ಶ್ರೇಯಾ ಶರಣ್​ ಮುಂತಾದವರು ನಟಿಸುತ್ತಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಕಥೆ ರಚಿಸಿದ್ದಾರೆ.

ಈಗಾಗಲೇ ಹೈದರಾಬಾದ್​ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಿ, 2021ರ ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net