ದರ್ಶನ್​ ಲೈವ್​ ಬರ್ತಾರೆ ... ಡೇಟ್ ಟೈಮ್ ಮಾರ್ಕ್ ಮಾಡಿಟ್ಟಿಕೊಳ್ಳಿ ...

Darshan - Final
Published on

ಬೆಂಗಳೂರು: 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಅವರಿಗೆ ಫೇಸ್​ಬುಕ್​ನಲ್ಲಿ ಲೈವ್​ ಬರುವುದು ಹೊಸ ವಿಷಯವೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ಲೈವ್​ ಬರದೆ ಬಹಳ ಸಮಯವೇ ಆಗಿತ್ತು. ಈಗ ಬಹಳ ದಿನಗಳ ನಂತರ ಅವರು ಲೈವ್​ ಬಂದು ತಮ್ಮ ಅಭಿಮಾನಿಗಳೊಂದಿಗೆ ಮಾತನಾಡುವುದಕ್ಕೆ ಸಜ್ಜಾಗಿದ್ದಾರೆ.

ಈ ವಿಷಯವಾಗಿ ದರ್ಶನ್​ ಅಭಿಮಾನಿ ಸಂಘವಾದ ಡಿ ಕಂಪೆನಿ ಅಫೀಷಿಯಲ್​ ಕಡೆಯಿಂದ ಪ್ರಕಟಣೆ ಹೊರಬಿದ್ದಿದೆ. ಅದರ ಪ್ರಕಾರ, ದರ್ಶನ್​ ಅವರು ಇದೇ ಭಾನುವಾರ ಅಂದರೆ ಜನವರಿ 10ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಲೈವ್​ ಬರಲಿದ್ದಾರೆ. ಆ ಸಮಯದಲ್ಲಿ ಅಭಿಮಾನಿಗಳು ಅವರ ಜತೆಗೆ ಚರ್ಚೆ ಮಾಡಬಹುದಾಗಿದೆ.

ಎಲ್ಲಾ ಸರಿ, ದರ್ಶನ್​ ಅವರ ಫೇಸ್​ಬುಕ್​ ಪೇಜ್​ ಹೆಸರೇನು ಎಂದು ಗೊತ್ತಿಲದ್ದವರು ಕೇಳಬಹುದು. ದರ್ಶನ್​ ಅವರು ತಮ್ಮ ನಿಮ್ಮ ಪ್ರೀತಿಯ ದಾಸ ದರ್ಶನ್​ ಪೇಜ್​ನಲ್ಲಿ ಲೈವ್​ ಬಂದು, ಹಲವು ವಿಷಯಗಳ ಕುರಿತಾಗಿ ಅಭಿಮಾನಿಗಳ ಜತೆಗೆ ಮಾತನಾಡಲಿದ್ದಾರೆ.

ಅಂದಹಾಗೆ, ದರ್ಶನ್ ಇನ್ನಷ್ಟೇ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದ್ದು, ಸದ್ಯದಲ್ಲೇ 'ರಾಜವೀರ ಮದಕರಿ ನಾಯಕ' ಚಿತ್ರದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ರಾಕ್​ಲೈನ್​ ವೆಂಕಟೇಶ್​ ನಿರ್ಮಿಸುತ್ತಿದ್ದು, ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net