ದರ್ಶನ್​ ಅಭಿಮಾನಿಗಳಿಂದ ರಾಬರ್ಟ್ ಸಿನಿಮಾ ಪ್ರಚಾರವೇ ವಿಭಿನ್ನ!

collage (9)
Published on

ಕರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದರೆ ಮನೆಯಲ್ಲಿಯೇ ಇರಬೇಕು, ಜನಜಂಗುಳಿಯಿಂದ ದೂರವೇ ಉಳಿಯಬೇಕು. ಮಾಸ್ಕ್​ ಇದ್ದರಷ್ಟೇ ಮನೆಯಿಂದ ಹೊರಬರಬೇಕು. ಹೀಗೆ ಒಂದಷ್ಟು ನಿಯಮಗಳು ಇದೀಗ ಜಾರಿಯಲ್ಲಿವೆ. ಈ ನಿಯಮವನ್ನು ವಿಭಿನ್ನ ರೀತಿಯಲ್ಲಿ ಪಾಲಿಸುತ್ತ, ಜಾಗೃತಿಗೂ ಮುಂದಾಗಿದ್ದಾರೆ ದರ್ಶನ್​ ಅಭಿಮಾನಿಗಳು.

ಹೌದು, ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅದರಲ್ಲೂ ಸಿನಿಮಾ ಏನಾದರೂ ರಿಲೀಸ್​ ಆಗುತ್ತಿದೆ ಎಂದಾದರೆ ಹಬ್ಬವನ್ನೇ ಆಚರಿಸ್ತಾರೆ ಅಭಿಮಾನಿಗಳು. ಆದರೆ, ಇದೀಗ ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಸಂಪೂರ್ಣ ಸ್ಥಗಿತಗೊಂಡಿದೆ. ಆನ್​ಲೈನ್​ ಓಟಿಟಿಗಳಲ್ಲಿ ಮಾತ್ರ ಕನ್ನಡದ ಆಗೊಂದು ಈಗೊಂದು ಸಿನಿಮಾ ಬಿಡುಗಡೆ ಆಗುತ್ತಿವೆ. ಹೀಗಿರುವಾಗಲೇ ರಾಬರ್ಟ್ ಸಿನಿಮಾ ಬಗ್ಗೆ ದರ್ಶನ್​ ಅಭಿಮಾನಿಗಳು ವಿಭಿನ್ನ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ ತಿಂಗಳಲ್ಲಿ ರಾಬರ್ಟ್ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಿಡುಗಡೆ ಆಗಲಿಲ್ಲ. ಹೀಗಿರುವಾಗ ದರ್ಶನ್​ ಫ್ಯಾನ್ಸ್ ರಾಬರ್ಟ್​ ಸಿನಿಮಾ ಪೋಸ್ಟರ್ ಇರುವ ಮಾಸ್ಕ್​ಗಳನ್ನು ಸಿದ್ಧಪಡಿಸಿದ್ದಾರೆ. ಈ ಮಾಸ್ಕ್​ಗಳನ್ನು ಮಾರಾಟ ಮಾಡಲಾಗುತ್ತಿದೆಯಾ ಅಥವಾ ಕೇವಲ ಫ್ರೀಯಾಗಿ ಹಂಚಲಾಗುತ್ತಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net