ತಮಗೆ ಸಿಕ್ಕ ರುಚಿಕರವಾದ ಭಕ್ಷ್ಯಗಳ ಫೋಟೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, "ಧನ್ಯವಾದಗಳು" ಎಂದು ಬರೆದಿದ್ದಾರೆ. ನಟಿ ಹಂಚಿಕೊಂಡ ಆಹಾರ ಪದಾರ್ಥಗಳ ಫೋಟೋದಲ್ಲಿ ಹೈದರಾಬಾದಿ ಪುಲಾವ್‌ನಿಂದ ಹಿಡಿದು ಹಲವು ತೆಲುಗು ಸ್ಟೈಲ್ ಭಕ್ಷ್ಯಗಳು ಕಾಣಿಸುತ್ತಿವೆ. ಅಂದಹಾಗೆ, ಹೈದರಾಬಾದ್ನಲ್ಲಿ ನಟ ಪ್ರಭಾಸ್ ಜೊತೆಗಿನ ನಾಗ್ ಅಶ್ವಿನ್ ಅವರ ಮುಂದಿನ ಸಿನಿಮಾಗೆ ತಮ್ಮ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ ನಟಿ, ಹೈದರಾಬಾದ್ ಇಂದ ಮುಂಬೈಗೆ ಮರಳುತ್ತಾ, “ಹೈದರಾಬಾದ್ ತುಂಬಾ ಚೆನ್ನಾಗಿತ್ತು. ಬೈ'', ಎಂಬ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.