ಹೊಸ ವರ್ಷದ ಹಾಡಿನಲ್ಲಿ ಚಂದನ್, ರಚಿತಾ ಅವರ ಲುಕ್ ಹೇಗಿರಲಿದೆ? ಮೊದಲ ಪೋಸ್ಟರ್ ವೈರಲ್!

Published on
ಬೆಂಗಳೂರು: ಹೊಸ ವರ್ಷಕ್ಕೆ ಇನ್ನು 17 ದಿನಗಳು ಮಾತ್ರ ಉಳಿದಿವೆ. ಅಷ್ಟರಲ್ಲಿಯೇ ಕಳೆದ ವರ್ಷದಂತೆ ಮತ್ತೊಂದು ಕಲರ್​ಫುಲ್ ಹಾಡಿನ ಮೂಲಕ ಆಗಮಿಸಲು ಸಿದ್ಧತೆಯಲ್ಲಿದ್ದಾರೆ ರ್ಯಾಪರ್ ಚಂದನ್ ಶೆಟ್ಟಿ. ವಿಶೇಷ ಏನೆಂದರೆ, ಈ ಸಲ ನಟಿ ರಚಿತಾ ರಾಮ್ ಚಂದನ್ ಜತೆ ಕೈ ಜೋಡಿಸಿದ್ದಾರೆ ಎಂಬ ಸುದ್ದಿಗಳು ಇಷ್ಟು ದಿನ ಹರಿದಾಡುತ್ತಿದ್ದವು. ಆದರೆ, ಇದೀಗ ಅದು ಅಧಿಕೃತವಾಗಿ ರಿವೀಲ್ ಆಗಿದೆ.
ಹೌದು, ಈ ವಿಚಾರವನ್ನು ಚಂದನ್ ಶೆಟ್ಟಿ ಅವರೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿವೀಲ್ ಮಾಡಿದ್ದಾರೆ. ನ್ಯೂ ಇಯರ್ ಸಲುವಾಗಿ ಬರಲಿರುವ ಹಾಡಿನಲ್ಲಿ ನಟಿ ರಚಿತಾ ಹೆಜ್ಜೆ ಹಾಕುತ್ತಿದ್ದಾರೆ. ಈಗಾಗಲೇ ಕಲರ್​ಫುಲ್ ಸೆಟ್​ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ‘'ಅಲೆಲೆಲೆಲೆ ಇವ್ಳು ಚೆಂದಾಗವ್ಳೆ..'’ ಎಂಬ ಸಾಹಿತ್ಯವನ್ನೂ ಬರೆದಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ  ಈ ಹಾಡಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಕ್ಯಾಪ್ಷನ್ ಮೂಲಕ ಹಂಚಿಕೊಂಡಿದ್ದಾರೆ. 
ಈಗ ಬಿಡುಗಡೆಯಾದ ಹಾಡಿನ ಪೋಸ್ಟರ್​ನಲ್ಲಿ ನಟಿ ರಚಿತಾ ಹಾಟ್ ಅವತಾರ ತಾಳಿದರೆ, ಚಂದನ್ ಅವರು ಸೂಪರ್ ಡ್ಯಾಶಿಂಗ್ ಆಗಿ ಮಿಂಚುತ್ತಿದ್ದಾರೆ. ಇಲ್ಲಿಯವರೆಗೂ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಾಗಿರುತ್ತಿದ್ದ ರಚಿತಾ, ಇದೇ ಮೊದಲ ಸಲ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆ ಹಾಡಿನ ಸಣ್ಣ ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಡಿಂಪಲ್ ಕ್ವೀನ್ ರಚಿತಾ ಹಂಚಿಕೊಂಡಿದ್ದು ಅವು ಸಿಕ್ಕಾಪಟ್ಟೆ ವೈರಲ್ ಆಗಿವೆ. ಹೊಸ ವರ್ಷ ಅಥವಾ ಡಿಸೆಂಬರ್ ಕೊನೇ ವಾರದಲ್ಲಿ ಈ ಹಾಡು ಬಿಡುಗಡೆ ಆಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net