ಲಾರಾ ದತ್ತಾ 2000ರಲ್ಲಿ ಪ್ರಶಸ್ತಿಯನ್ನು ಭಾರತಕ್ಕೆ ತಂದರು. ಆಗ, ಈ ಸೌಂದರ್ಯ ಸ್ಪರ್ಧೆ ಮಹಿಳೆಯರನ್ನು ವಸ್ತುನಿಷ್ಠಗೊಳಿಸುತ್ತಿದೆ ಎಂದು ಪ್ರತಿಭಟನೆಗಳು ಸ್ಫೋಟಗೊಂಡಿದ್ದವು. ಅದರಿಂದ, ನಟಿ ಲಾರಾ ಅವರಿಗೆ, ''ಈ ಸೌಂದರ್ಯ ಸ್ಪರ್ಧೆಯ ವಿರುದ್ಧ ಪ್ರತಿಭಟನೆಕಾರರ ಅಭಿಪ್ರಾಯ ತಪ್ಪು ಎಂದು ಅವರಿಗೆ ಹೇಗೆ ಮನವರಿಕೆ ಮಾಡುತ್ತೀರಿ ಎಂಬ ಪ್ರಶ್ನೆ ಕೇಳಲಾಯಿತು?''. ಇದಕ್ಕೆ ಲಾರಾ, "ಮಿಸ್ ಯೂನಿವರ್ಸ್ ಸ್ಪರ್ಧೆ ನಮ್ಮಂತಹ ಯುವತಿಯರಿಗೆ ನಾವು ಬಯಸುವ ಕ್ಷೇತ್ರಗಳಲ್ಲಿ ಮುನ್ನುಗ್ಗಲು ವೇದಿಕೆಯನ್ನು ನೀಡುತ್ತಿದೆ ಎಂದು ನಾನು ಭಾವಿಸುತ್ತೇನೆ. ಉದ್ಯಮಶೀಲತೆಯಾಗಿರಬಹುದು, ಸಶಸ್ತ್ರ ಪಡೆ ಆಗಿರಬಹುದು, ರಾಜಕೀಯವಾಗಿರಬಹುದು ಅಥವಾ ಯಾವುದೇ ಕ್ಷೇತ್ರವಾಗಿರಬಹುದು... ಈ ಸ್ಪರ್ಧೆ ನಮಗೆ ಅವಕಾಶ ನೀಡುತ್ತದೆ. ನಮ್ಮ ಆಯ್ಕೆಗಳು ಮತ್ತು ಅಭಿಪ್ರಾಯಗಳನ್ನು ಧ್ವನಿಯೆತ್ತಿ ಹೇಳುವಂತಹ ವೇದಿಕೆ ಇದಾಗಿದ್ದು, ನಮ್ಮನ್ನು ಬಲವಾಗಿ, ಸ್ವತಂತ್ರರನ್ನಾಗಿಸಿದೆ'', ಎಂದು ಉತ್ತರಿಸಿದರು. ಈ ಸಂರ್ದಭಗಳಲ್ಲೂ ಸುಶ್ಮಿತಾ ಸೇನ್, ಲಾರಾ ದತ್ತಾ ಕೊಟ್ಟ ಉತ್ತರಗಳು, ಅವರ ಗೆಲುವಿಗಿಂತ ಎಲ್ಲೆಡೆ ಹೆಚ್ಚು ಚರ್ಚೆಗೆ ಗ್ರಾಸವಾದವು.