ಶಾರುಖ್​, ನಯನತಾರಾಗೆ ಒಲಿದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Sharukh Nayana
Published on

ನವದೆಹಲಿ: ನಿನ್ನೆ (ಫೆ.20) ಸಂಜೆ ಮುಂಬೈನಲ್ಲಿ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ​ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭ ನಡೆಯಿತು. ಅದ್ಧೂರಿ ಕಾರ್ಯಕ್ರಮಕ್ಕೆ ಶಾರುಖ್​ ಖಾನ್​, ಕರೀನಾ ಕಪೂರ್​​, ಆದಿತ್ಯ ರಾಯ್​, ರಾಣಿ ಮುಖರ್ಜಿ, ಆಟ್ಲಿ ಮತ್ತು ನಯನತಾರಾ ಸೇರಿದಂತೆ ಸಾಕಷ್ಟು ಕಲಾವಿದರು ಹಾಜರಿದ್ದರು.

ಈ ಸಮಾರಂಭದಲ್ಲಿ ಜವಾನ್​ ಚಿತ್ರದ ಅತ್ಯುತ್ತಮ ನಟನೆಗಾಗಿ ಶಾರುಖ್​ ಖಾನ್ ಮತ್ತು ನಯನತಾರಾ ಅವರು ದಾದಾಸಾಹೇಬ್​ ಅಂತಾರಾಷ್ಟ್ರೀಯ ಫಾಲ್ಕೆ ಪ್ರಶಸ್ತಿ ಪ್ರಶಸ್ತಿ ಪಡೆದರು. ​

ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ- 2024ರ ವಿಜೇತರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

* ಉತ್ತಮ ನಟ: ಶಾರುಖ್​ ಖಾನ್​ (ಜವಾನ್​)

* ಉತ್ತಮ ನಟಿ: ನಯನತಾರಾ (ಜವಾನ್​)

* ಉತ್ತಮ ನಟಿ: ರಾಣಿ ಮುಖರ್ಜಿ (ಮಿಸ್ಟರ್​ ಚಟರ್ಜಿ vs ನಾರ್ವೆ)

* ಉತ್ತಮ ನಿರ್ದೇಶಕ: ಸಂದೀಪ್​ ರೆಡ್ಡಿ ವಂಗಾ (ಅನಿಮಲ್​)

* ಉತ್ತಮ ನಟ (ವಿಮರ್ಶೆ): ವಿಕ್ಕಿ ಕುಶಾಲ್​ (ಸ್ಯಾಮ್​ ಬಹದೂರ್​)

* ಉತ್ತಮ ಸಂಗೀತ ನಿರ್ದೇಶಕ: ಅನಿರುದ್ಧ ರವಿಚಂದರ್​ (ಜವಾನ್​)

* ಉತ್ತಮ ಹಿನ್ನೆಲೆ ಗಾಯಕ: ವರುಣ್​ ಜೈನ್​ ( ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾದಿಂದ ತೇರೆ ವಸ್ತೆ)

* ಉತ್ತಮ ಖಳನಟ: ಬಾಬಿ ಡಿಯೋಲ್​ (ಅನಿಮಲ್​)

* ಉತ್ತಮ ನಟಿ (ಕಿರುತೆರೆ): ರೂಪಾಲಿ ಗಂಗೂಲಿ (ಅನುಪಮಾ)

* ಉತ್ತಮ ನಟ (ಕಿರುತೆರೆ): ನೈಲ್​​ ಭಟ್​ (ಘಮ್​ ಹಾಯ್​ ಕಿಸಿಕೆ ಪ್ಯಾರ್​ ಮೇನ್​)

* ವರ್ಷದ ಟೆಲಿವಿಷನ್​ ಸರಣಿ: ಘಮ್​ ಹಾಯ್​ ಕಿಸಿಕೆ ಪ್ಯಾರ್​ ಮೇನ್​

* ಉತ್ತಮ ನಟಿ (ವೆಬ್​ ಸರಣಿ): ಕರಿಷ್ಮಾ ತನ್ನಾ (ಸ್ಕೂಪ್​)

* ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಮೌಶುಮಿ ಚಟರ್ಜಿ

* ಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಕೆ ಜೆ ಯೇಸುದಾಸ್​

ಇದೇ ಸಂದರ್ಭದಲ್ಲಿ ನಿರ್ದೇಶಕ ಆಟ್ಲಿ, ನಟ ಶಾಹಿದ್ ಕಪೂರ್ ಮತ್ತು ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಕೂಡ 2023 ರಲ್ಲಿ ತಮ್ಮ ಪ್ರಯತ್ನಗಳಿಗಾಗಿ ಪ್ರಶಸ್ತಿಯನ್ನು ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net