More

    ಟಿಲ್ಲು ಸ್ಕ್ವೇರ್​ ಚಿತ್ರದಲ್ಲಿ ಲಿಪ್​​​​​ಲಾಕ್​​​ ಮಾಡಲು ಇಷ್ಟೊಂದು ಸಂಭಾವನೆ ಪಡೆದ್ರಾ ಅನುಪಮಾ!

    ಹೈದರಾಬಾದ್​​: ನಟ ಸಿದ್ದು ಜೊನ್ನಲಗಡ್ಡ ಅಭಿನಯದ ಟಾಲಿವುಡ್​ ಸೂಪರ್​​ ಹಿಟ್​ ಸಿನಿಮಾ ಡಿಜಿ ಟಿಲ್ಲು ಸೀಕ್ವೆಲ್​ ‘ಟಿಲ್ಲು ಸ್ಕ್ವೇರ್​’ ಮಾರ್ಚ್​ 29ಕ್ಕೆ ಬಿಡುಗಡೆಯಾಗಲಿದೆ. ಮೊದಲ ಭಾಗ ಸಿಕ್ಕಾಪಟ್ಟೆ ಹಿಟ್​ ಆಗಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿ ರಸಿಕರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದರೋ ಅದೆಲ್ಲವೂ ಟ್ರೈಲರ್​ನಲ್ಲಿ ಇರುವುದರನ್ನು ಕಂಡು ಫುಲ್​​ ಖುಷಿಯಾಗಿದ್ದಾರೆ.

    ಭಾಗ ಒಂದರಲ್ಲಿ ನೇಹಾ ಶೆಟ್ಟಿ ಮಾಡಿದ್ದ ರಾಧಿಕಾ ಪಾತ್ರವನ್ನು ಎರಡನೇ ಭಾಗದಲ್ಲಿ ಖ್ಯಾತ ನಟಿ ಅನುಪಮಾ ಪರಮೇಶ್ವರನ್​ ಮಾಡಿದ್ದಾರೆ. ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ, ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್​ನಲ್ಲೂ ಅದರ ಸುಳಿವು ಇದೆ.

    ಒಳ್ಳೆಯ ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ ಎಂಬ ಅನುಪಮಾ ಅವರ ಡೈಲಾಗ್​ ಟ್ರೈಲರ್​ನ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ, ಅನುಪಮಾ ಅವರ ಲಿಪ್​ಲಾಕ್​ ದೃಶ್ಯ ಹಾಗೂ ಬೋಲ್ಡ್​ ಅವತಾರ ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟೊಂದು ಬೋಲ್ಡ್​ ಆಗಿ ನಟಿಸಿರುವ ಅನುಪಮಾ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಮೂಲಗಳ ಪ್ರಕಾರ ಸಾಮಾನ್ಯವಾಗಿ ಅನುಪಮಾ ಅವರು 1 ರಿಂದ 1.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ, ಟಿಲ್ಲು ಸ್ಕ್ವೇರ್​ ಸಿನಿಮಾಗಾಗಿ ಅನುಪಮಾ ಬರೋಬ್ಬರಿ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಿಂದೆಂದೂ ಕಾಣದ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಅನುಪಮಾ ಪಡೆದ ಸಂಭಾವನೆಯೇ ಕಾರಣ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ಸಿನಿಮಾಗಳಲ್ಲಿಯೂ ಅನುಪಮಾ ಇಷ್ಟೇ ಸಂಭಾವನೆ ಪಡೆಯಲಿದ್ದಾರೆ.

    ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್​ಬಸ್ಟರ್​ ಹಿಟ್​ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್​ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

    ತಮ್ಮ ಸಹಜ ಸೌಂದರ್ಯದಿಂದಲೇ ಅನುಪಮಾ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದುವರೆಗೂ ಹೆಚ್ಚೇನು ಬೋಲ್ಡ್​ ಪಾತ್ರಗಳಲ್ಲಿ ನಟಿಸದ ಅನುಪಮಾ ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಆಗಿ ನಟಿಸುವ ಮೂಲಕ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ. ದೀರ್ಘ ಕಾಲದ ಲಿಪ್​ಲಾಕ್ ದೃಶ್ಯ​, ತುಂಡುಡುಗೆ ಹಾಗೂ ಸೆಕ್ಸ್ ಡೈಲಾಗ್​ ಸೇರಿದಂತೆ ಹೊಸ ಪ್ರಯತ್ನಕ್ಕೆ ಅನುಪಮಾ ಕೈಹಾಕಿದ್ದು, ಈ ಬಾರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

    ಅಂದಹಾಗೆ ಟಿಲ್ಲು ಸ್ಕ್ವೇರ್​ ಸಿನಿಮಾ ಮಾರ್ಚ್​ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಮಲಿಕ್​ ರಾಮ್​ ನಿರ್ದೇಶನ ಮಾಡಿದ್ದಾರೆ. ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)​

    ವಿರುಷ್ಕಾ ದಂಪತಿಯ ಪುತ್ರ ಅಕಾಯ್​ ಹೆಸರಿನ ಅರ್ಥವೇನು? RCB ಕುಟುಂಬದ ಕಿರಿಯ ಸದಸ್ಯನಿಗೆ ಸ್ವಾಗತ

    ಮನೆ ನಂ. 5ರಲ್ಲಿ ವಾಸವಿದ್ದೀರಾ? ಕೂಡಲೇ ಎಚ್ಚೆತ್ತುಕೊಳ್ಳಿ, ಜೀವನವೇ ಸರ್ವನಾಶವಾಗಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts