

ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಬಾಲಿವುಡ್ಗೂ ಬಿಸಿ ತಟ್ಟಿದೆ. ಜಾನ್ ಅಬ್ರಹಾಂ, ಸ್ವರಾ ಭಾಸ್ಕರ್, ಮೃಣಾಲ್ ಠಾಕೂರ್, ನೋರಾ ಫತೇಹಿ ಸೇರಿ ಹಲವರಿಗೆ ಕೋವಿಡ್ ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, ಕೋವಿಡ್ನಿಂದ ಸುಧಾರಿಸಿಕೊಳ್ಳುವುದು ಅದೆಷ್ಟು ಕಷ್ಟ ಎಂದು ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ.
ದೀಪಿಕಾಗೂ ಈ ವಿಷಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ದೀಪಿಕಾಗೂ ಕಳೆದ ವರ್ಷ ಪಾಸಿಟಿವ್ ಆಗಿತ್ತು. ಕ್ರಮೇಣ ಹುಷಾರಾಗಿದ್ದಷ್ಟೇ ಅಲ್ಲ, ಎರಡು ತಿಂಗಳ ಕಾಲ ಕೆಲಸದಿಂದ ದೂರವೇ ಇದ್ದರು. ಈ ಕುರಿತು ಮಾತನಾಡಿರುವ ಅವರು. ‘ಚಿಕಿತ್ಸೆಯ
ನಂತರ ದೈಹಿಕವಾಗಿ ಸಾಕಷ್ಟು ಬದಲಾಗಿದ್ದೆ. ಚಿಕಿತ್ಸೆ ಮತ್ತು ಸ್ಟೆರಾಯ್್ಡಳಿಂದ ಗುರುತು ಸಿಗದಂತೆ ಆಗಿದ್ದೆ. ಅದರಿಂದ ನಮ್ಮ ದೇಹ, ಮನಸ್ಸು ಎರಡೂ ಸಾಕಷ್ಟು ಬದಲಾಗಿದೆ ಎಂದೆನಿಸಿತ್ತು’ ಎಂದು ಹೇಳಿದ್ದಾರೆ. ಇಲ್ಲಿ ವೈರಸ್ಗಿಂತ ಅದರ ಪರಿಣಾಮಗಳು ಸಾಕಷ್ಟು ಸಮಯ ಇರುತ್ತದೆ ಎನ್ನುವ ದೀಪಿಕಾ, ‘ವೈರಸ್ನ ವ್ಯತಿರಿಕ್ತ ಪರಿಣಾ ಮದಿಂದಾಗಿ ಎರಡು ತಿಂಗಳ ಕಾಲ ಬ್ರೇಕ್ ತೆಗೆದು ಕೊಳ್ಳಬೇಕಾಯಿತು. ನನ್ನ ಮನಸ್ಸು ಸರಿ ಇರಲಿಲ್ಲ. ಈ ಸಮಯ ನನ್ನ ಪಾಲಿಗೆ ಬಹಳ ಕಷ್ಟಕರವಾಗಿತ್ತು’ ಎಂದು ದೀಪಿಕಾ ಹೇಳಿದ್ದಾರೆ. -ಏಜೆನ್ಸೀಸ್