

ಅಮರಾವತಿ: ಕರೊನಾ ಪೂರ್ತಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅನೇಕರು ಕರೊನಾದಿಂದಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಿನಿಮಾ ರಂಗದಲ್ಲೂ ಕರೊನಾ ಕರಿ ನೆರಳು ಬಿದ್ದಿದ್ದು, ತಮ್ಮ ಕರೊನಾ ದಿನಗಳ ಅನುಭವಗಳನ್ನು ನಟಿಯೊಬ್ಬರು ಹಂಚಿಕೊಂಡಿದ್ದಾರೆ.
ತೆಲುಗು ನಟಿ, ತೆಲುಗು ಬಿಗ್ಬಾಸ್ನ ಮಾಜಿ ಸ್ಪರ್ಧಿ ಹರಿ ತೇಜಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಡೆಲಿವರಿ ಆಗುವುದಕ್ಕೆ ಒಂದು ವಾರ ಮೊದಲು ಅವರಿಗೆ ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕರೊನಾ ದೃಢವಾಗಿತ್ತಂತೆ. ಆ ಕಾರಣದಿಂದಾಗಿ ಅವರಿಗೆ ಮಗುವನ್ನು ಬಿಟ್ಟಿರಬೇಕಾದ ಪರಿಸ್ಥಿತಿ ಎದುರಾಯಿತಂತೆ. ಕುಟುಂಬದವರು ಯಾರೂ ಮಗುವನ್ನು ನೋಡಿ, ಮುದ್ದಾಡಲು ಆಗಿರಲಿಲ್ಲವಂತೆ.
ಈ ವಿಚಾರವಾಗಿ ನಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದೇ ಕಾರಣದಿಂದಾಗಿ ಅಭಿಮಾನಿಗಳು ಶುಭ ಕೋರಿದರೂ ಅದಕ್ಕೆ ಪ್ರತಿಕ್ರಿಯಿಸಲು ಆಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)