ಅನಿರುದ್ಧ್-ಕಾವ್ಯಾ ಮದುವೆ: ಮೋದಿ, ರಾಹುಲ್, ವಿಜಯ್‌ ಸೇರಿ ಹೈ-ಪ್ರೊಫೈಲ್ ಅತಿಥಿಗಳ ಪಟ್ಟಿ ರಿಲೀಸ್​, ಆಂಡ್ರಿಯಾಗೂ ಆಹ್ವಾನ! Anirudh Ravichander - Kavya Maran

Anirudh Ravichander - Kavya Maran
ಕಾವ್ಯಾ ಮಾರನ್​, ಅನಿರುದ್ಧ್ ರವಿಚಂದರ್​ ಹಾಗೂ ಆಂಡ್ರಿಯಾ ಜೆರಮಿಯಾ
Published on: 

ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ (SRH) ಐಪಿಎಲ್ ತಂಡದ ಮುಖ್ಯಸ್ಥೆ ಕಾವ್ಯಾ ಮಾರನ್ ( Anirudh Ravichander - Kavya Maran ) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ನವೆಂಬರ್​ 11 ರಂದು ಗ್ರೀಸ್‌ನ ಸುಂದರ ತಾಣದಲ್ಲಿ ಈ ಜೋಡಿಯ ವಿವಾಹ ಮಹೋತ್ಸವ ನಡೆಯಲಿದ್ದು, ಬಳಿಕ ನವೆಂಬರ್ 21 ರಂದು ತಮಿಳುನಾಡಿನ ಚೆನ್ನೈನ ಪಂಚತಾರಾ ಹೋಟೆಲ್ ಒಂದರಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಲಾಗಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಈ ರಿಸೆಪ್ಷನ್‌ನ ಆಹ್ವಾನ ಪತ್ರಿಕೆ ಹಾಗೂ ಅದರಲ್ಲಿರುವ ವಿವಿಐಪಿ (VVIP) ಅತಿಥಿಗಳ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Also Read
'ನನ್ನಿಂದ ತಪ್ಪಾಗಿದೆ, ಪ್ರಿವಿಲೇಜ್ ಬಳಸಿ ಪ್ರಶ್ನಿಸಬೇಕಿತ್ತು'; ಪೆದ್ದಿ ಸಿನಿಮಾದ ಅಚ್ಚಿಯಮ್ಮ ಪಾತ್ರದ ಬಗ್ಗೆ Janhvi Kapoor ಮುಕ್ತ ಮಾತು!
Anirudh Ravichander - Kavya Maran

ವರದಿಗಳ ಪ್ರಕಾರ, ಈ ರಿಸೆಪ್ಷನ್‌ಗೆ ದೇಶದ ಗಣ್ಯಾತಿಗಣ್ಯ ರಾಜಕಾರಣಿಗಳು ಹಾಗೂ ಚಲನಚಿತ್ರ ರಂಗದ ಅಗ್ರಗಣ್ಯ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರುಗಳು ಅತಿಥಿಗಳ ಪಟ್ಟಿಯಲ್ಲಿವೆ. ಇದಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರುಗಳಿಗೂ ಆಹ್ವಾನ ತಲುಪಿದೆ.

ಚಿತ್ರರಂಗ ಹಾಗೂ ಕಲಾ ಕ್ಷೇತ್ರದಿಂದಲೂ ದೊಡ್ಡ ಮಟ್ಟದ ತಾರಾಗಣ ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ನಟಿ ಆಂಡ್ರಿಯಾ ಜೆರೆಮಿಯಾ, ನಟ ಪ್ರಸನ್ನ ಹಾಗೂ ಮಲಯಾಳಂ ನಟ ಸುರಾಜ್ ವೆಂಜಾರಮೂಡು ಸೇರಿದಂತೆ ಹಲವು ಜನಪ್ರಿಯ ಕಲಾವಿದರಿಗೆ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

ಅಂದಹಾಗೆ, ಅನಿರುದ್ಧ್ ಅವರ ಆರಂಭಿಕ ಯಶಸ್ಸಿನ ದಿನಗಳಲ್ಲಿ ನಟಿ ಮತ್ತು ಗಾಯಕಿ ಆಂಡ್ರಿಯಾ ಜತೆಗಿನ ನಿಕಟ ಸಂಬಂಧ ಹಾಗೂ ಅವರ ಖಾಸಗಿ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದವು. ಈ ಘಟನೆಯ ನಂತರ ಇಬ್ಬರೂ ತಮ್ಮ ವೃತ್ತಿಪರ ಜೀವನದತ್ತ ಸಂಪೂರ್ಣ ಗಮನ ಹರಿಸಿ, '3' ಚಿತ್ರದ "ಕಣ್ಣಾಳನೇ" ಮತ್ತು 'ಮಾಸ್ಟರ್' ಚಿತ್ರದ "ಓ ಅಂಧ ಕಣ್ಣಾ ಪೊವಾ" ನಂತಹ ಪ್ರಸಿದ್ಧ ಹಾಡುಗಳಲ್ಲಿ ಗಾಯಕರಾಗಿ ಜತೆಯಾಗಿ ಕೆಲಸ ಮಾಡುವ ಮೂಲಕ ತಮ್ಮ ಪರಿಪಕ್ವತೆಯನ್ನು ಮೆರೆದಿದ್ದಾರೆ. ಇಂದು ಅನಿರುದ್ಧ್ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಂಬರ್ ಒನ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರೆ, ಆಂಡ್ರಿಯಾ ಅವರು ಗಾಯಕಿ ಹಾಗೂ ಗಂಭೀರ ಅಭಿನಯದ ನಟಿಯಾಗಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಕಾಯ್ದುಕೊಂಡಿದ್ದಾರೆ.

ಆದಾಗ್ಯೂ, ಈ ಹೈ-ಪ್ರೊಫೈಲ್ ಮದುವೆ ಮತ್ತು ಆರತಕ್ಷತೆಯ ಅತಿಥಿಗಳ ಪಟ್ಟಿಯ ಕುರಿತು ಅನಿರುದ್ಧ್ ಅಥವಾ ಕಾವ್ಯಾ ಮಾರನ್ ಅವರ ಕುಟುಂಬದ ಮೂಲಗಳು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಕ್ರಿಕೆಟ್ ಹಾಗೂ ಸಿನಿರಂಗದ ಸೂಪರ್ ಸ್ಟಾರ್ ಜೋಡಿಯ ಈ ಕಲ್ಯಾಣ ಮಹೋತ್ಸವವು ಭಾರತೀಯ ರಾಜಕೀಯ ಮತ್ತು ಸಿನಿಮಾ ರಂಗದ ಪ್ರಮುಖ ಗಣ್ಯರ ಅಪರೂಪದ ಸಮಾಗಮಕ್ಕೆ ವೇದಿಕೆಯಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

Also Read
ರಾವಣ ಕೆಟ್ಟವನಲ್ಲ... ನಟಿ ಸಾಯಿ ಪಲ್ಲವಿ ಹೇಳಿಕೆಗೆ ಶುರುವಾಯ್ತು ಪರ-ವಿರೋಧ ಚರ್ಚೆ! ನಿಮ್ಮ ಅನಿಸಿಕೆ ಏನು? Sai Pallavi
Anirudh Ravichander - Kavya Maran

ಸನ್‌ ನೆಟ್‌ವರ್ಕ್ ಒಡೆಯ ಕಲಾನಿಧಿ ಮಾರನ್ ಅವರ ಪುತ್ರಿಯಾಗಿರುವ ಕಾವ್ಯಾ ಮಾರನ್ ಹಾಗೂ ಧನುಷ್ ನಟನೆಯ '3' ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದು ಬಹುಕೋಟಿ ಸಂಭಾವನೆ ಪಡೆಯುವ ಭಾರತದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದಿರುವ ಅನಿರುದ್ಧ್, 2024 ರಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net