'ನನ್ನಿಂದ ತಪ್ಪಾಗಿದೆ, ಪ್ರಿವಿಲೇಜ್ ಬಳಸಿ ಪ್ರಶ್ನಿಸಬೇಕಿತ್ತು'; ಪೆದ್ದಿ ಸಿನಿಮಾದ ಅಚ್ಚಿಯಮ್ಮ ಪಾತ್ರದ ಬಗ್ಗೆ Janhvi Kapoor ಮುಕ್ತ ಮಾತು!

ಪೆದ್ದಿ ಸಿನಿಮಾ ಬಗ್ಗೆ ಜಾನ್ವಿ ಮಾತು
ಪೆದ್ದಿ ಸಿನಿಮಾ ಬಗ್ಗೆ ಜಾನ್ವಿ ಮಾತು
Published on: 
  • ಪೆದ್ದಿ ಸಿನಿಮಾದ ವಿವಾದಾತ್ಮಕ ದೃಶ್ಯದ ಬಗ್ಗೆ ಜಾನ್ವಿ ಕಪೂರ್ ಮುಕ್ತ ಮಾತು.

  • ನಾನು ನನ್ನ ಸವಲತ್ತು ಬಳಸಿಕೊಂಡು ಪ್ರಶ್ನೆ ಮಾಡಬೇಕಿತ್ತು. ನನ್ನಿಂದ ದೊಡ್ಡ ತಪ್ಪಾಗಿದೆ.

  • ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕ್ಯಾಮೇರಾ ಆಂಗಲ್ ಹೇಗಿದೆ ಅನ್ನೋದೆ ತಿಳಿಯೋದಿಲ್ಲ ಎಂದ ಜಾನ್ವಿ.

Janhvi Kapoor On Peddi controversy: 'ನನ್ನದೇ ತಪ್ಪು. ನಾನು ಹೆಚ್ಚು ಪ್ರಶ್ನೆ ಮಾಡಬೇಕಾಗಿತ್ತು. ನನಗಿದ್ದ ಪ್ರಭಾವವನ್ನು ಬಳಸಿ ನಾನು ಪ್ರಶ್ನೆ ಮಾಡಬೇಕಿತ್ತು. ಆ ಪಾತ್ರದ ಬಗ್ಗೆ ಮಾತನಾಡಬೇಕಿತ್ತು. ನನಗೆ ಈಗಲೂ ಸಹ ಆ ಗಿಲ್ಟ್ ಇದೆ' ಹೀಗೆಂದು ಜಾನ್ವಿ ಕಪೂರ್​​​ ಕಾಫಿ ವಿತ್ ಕರಣ್​ ಜೋಹರ್​ ಟಾಕ್​ ಶೋನಲ್ಲಿ ಮನಬಿಚ್ಚಿ ಮುಕ್ತವಾಗಿ ಮಾತನಾಡಿದ್ದು ಪೆದ್ದಿ ಸಿನಿಮಾದ ಅಚ್ಚಿಯಮ್ಮ ಪಾತ್ರದ ಬಗ್ಗೆ.

ಹೌದು, 2026ರಲ್ಲಿ ರಿಲೀಸ್ ಆದ ರಾಮ್​ ಚರಣ್​ ನಟನೆಯ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ ನಟಿಸಿದ್ದ ಅಚ್ಚಿಯಮ್ಮ ಪಾತ್ರ ನಿರ್ವಹಿಸಿದ್ದರು.ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕೆತೆ, ಹಾಡಿನಲ್ಲಿ ನಟಿಗಿಂತ ಆಕೆಯ ದೇಹದ ಮೇಲೆ ಹೆಚ್ಚು ಫೋಕಸ್ ಮಾಡಲಾಗಿದೆ. ಅವರನ್ನು ಐಟಂ ಗರ್ಲ್​ನಂತೆ ಪ್ರದರ್ಶಿಸಲಾಗಿದೆ. ಸಮ್ಮತಿಯಿಲ್ಲದೆ ಚುಂಬಿಸುವ ದೃಶ್ಯ ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಈ ಬಗ್ಗೆ ಜಾನ್ವಿ ಮಾತನಾಡಿದ್ದು, ಚಿತ್ರೀಕರಣದ ಸಮಯದಲ್ಲಿ ತನಗೆ ತೀವ್ರ ಅಸೌಕರ್ಯ ಉಂಟಾಗಿತ್ತು. ಇದೊಂದು ವೈಲೇಟಿಂಗ್​ ಎಕ್ಸಪಿರಿಯನ್ಸ್ ಎಂದಿದ್ದಾರೆ.

ನಾನು ಪ್ರಶ್ನಿಸಬೇಕಿತ್ತು

ಪೆದ್ದಿ ಸಿನಿಮಾಕ್ಕಾಗಿ ಪ್ರತಿಯೊಬ್ಬ ನಟ-ನಟಿ, ಛಾಯಾ ಗ್ರಾಹಕರು ಸೇರಿದಂತೆ ಹಲವರು ಶ್ರಮಿಸಿದ್ದಾರೆ. ಹಾಗಾಗಿ ಆರಂಭದಲ್ಲಿ ನಾನೇನು ಮಾತನಾಡಬೇಕೆಂದು ತಿಳಿಯಲಿಲ್ಲ. ಆದರೆ, ಇಂತಹ ನಿರೂಪಣೆಗಳು ನಮ್ಮ ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ನಕರಾತ್ಮಕ ಪ್ರಭಾವ ಬೀರಿದ ಬಗ್ಗೆ ನನಗೆ ಇಂದಿಗೂ ಕಾಡುತ್ತಿದೆ. ಆ ಅಪರಾಧ ಪ್ರಜ್ಞೆಯನ್ನು ನಾನು ಸದಾ ಹೊತ್ತುಕೊಂಡು ಸಾಗುತ್ತೇನೆ. ನಾನು ಪ್ರಶ್ನಿಸದ ಬಗ್ಗೆ ಗಿಲ್ಟ್​​​ ಇದೆ ಎಂದರು ಜಾನ್ವಿ.

ತುಂಬಾ ಗಿಲ್ಟ್ ಕಾಡತ್ತೆ

ಮುಂದುವರೆದು, ನಾನು ಇನ್ನೂ ಈ ಬಗ್ಗೆ ಹೆಚ್ಚು ಪ್ರಶ್ನೆ ಮಾಡಬಹುದಿತ್ತೆ. ಹೌದು. ನಾನು ಜಾಗರೂಕತೆ ವಹಿಸಬೇಕಿತ್ತೆ. ಹೌದು. ಈ ಪಾತ್ರ ಸಮಸ್ಯೆಯಾತ್ಮಕವಾಗಿತ್ತೇ?, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ಕೊಟ್ಟಂತಿತ್ತೆ ಹೌದು. ಆದರೆ ನಾನೀಗ ಮಾಡಿರುವ ಧೃಡ ನಿರ್ಧಾರ ಎಂದರೆ, ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದು ಎಂದರು.

ನನ್ನ ಅಧಿಕಾರ ಬಳಸಿಕೊಳ್ಬಳಬೇಕಿತ್ತು

ನಾನು ಸಿನಿಮಾರಂಗಕ್ಕೆ ಪ್ರಿವಿಲೈಜ್ಡ್ ಹಿನ್ನಲೆಯಿಂದ ಬಂದವಳು, ನಾಣು ನನ್ನ ಸವಲತ್ತಿನ ಲಾಭ ಪಡೆದು ದೃಶ್ಯಗಳ ಬಗ್ಗೆ ಪ್ರಶ್ನೆ ಮಾಡಬೇಕಿತ್ತು. ನಿರ್ದೇಶಕರು ಹೇಳುವ ಎಲ್ಲ ಮಾತನ್ನು ಕೇಳುವ ಬದಲು ಮಾತನಾಡಬೇಕಿತ್ತು.ಪರಿಸ್ಥಿತಿಯನ್ನು ಕಡಿಮೆ ಸಮಸ್ಯೆಯಾಗಿಸಲು ನಾನು ಪ್ರಯತ್ನಿಸಿದೆ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಿತ್ತು ಎಂದಿದ್ದಾರೆ

ನಾನು ತಪ್ಪು ಮಾಡಿದ ಎಂದು ನನ್ನನ್ನು ನಾನು ಶಿಕ್ಷಿಸಿಕೊಳ್ಳುವ ಮುನ್ನ ಬ್ಲೇಮ್ ಶೇರ್ ಮಾಡುತ್ತಿದ್ದೇನೆ ಎನಿಸಬಹುದು. ಆದರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ದಕ್ಷಿಣ ಭಾರತದಲ್ಲಿ, ಬಹಳ ವಿರಳವಾಗಿ ಬೌಂಡ್ ಸ್ಕ್ರಿಪ್ಟ್ ಸಿಗುತ್ತದೆ. ಆ ಸ್ಕ್ರಿಪ್ಟ್‌ಗಳಲ್ಲಿ ಕ್ಯಾಮೆರಾ ಆಂಗಲ್ಸ್‌ಗಳು ಎಲ್ಲೆಲ್ಲಿ ಇರಬೇಕು ಎಂದು ಬಹಳ ವಿರಳವಾಗಿ ಉಲ್ಲೇಖಿಸಿರುತ್ತಾರೆ. ಅವರು ಕ್ಯಾಮೆರಾ ಎಲ್ಲಿ ಹಿಡಿದಿದ್ದಾರೆ ಎಂದು ತಿಳಿಯೋದೆ ಕಷ್ಟ. ನಿರ್ದೇಶಕರು ಹೇಳಿದಂತೆ ಕೇಳಬೇಕಾಗುತ್ತದೆ ಎಂದರು ಜಾನ್ವಿ.

ವಿವಾದಕ್ಕೆ ಕಾರಣವೇನು?

ಚಿತ್ರ ಬಿಡುಗಡೆಯಾದ ಬಳಿಕ, ನಾಯಕಿಯ ಪಾತ್ರವನ್ನು ಮಹಿಳಾ ಪ್ರಧಾನವಾಗಿ ಬಿಂಬಿಸುವ ಬದಲು ಕೇವಲ ದೈಹಿಕ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ವಿಶೇಷವಾಗಿ ವಿದ್ಯುತ್ ಕಟ್ ಆದ ಸಂದರ್ಭದಲ್ಲಿ ನಾಯಕನು ನಾಯಕಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಚುಂಬಿಸುವ ದೃಶ್ಯವು ಭಾರಿ ವಿವಾದ ಸೃಷ್ಟಿಸಿತ್ತು. ಈ ವಿವಾದದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಕೂಡ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net