ಸೌತ್​ ಬ್ಯೂಟಿ ತ್ರಿಷಾ ರಹಸ್ಯವಾಗಿ ಮದ್ವೆ ಆಗಿದ್ದಾರಾ? ಲಂಡನ್ ಸೆಲ್ಫಿಯಲ್ಲಿ ನಿಗೂಢ ಲಾಕೆಟ್ ಬಿಚ್ಚಿಟ್ಟ ಆ ಗುಟ್ಟು ಏನು? Trisha Krishnan

ಸಿನಿಮಾ ಶೂಟಿಂಗ್ ನಿಮಿತ್ತ ಲಂಡನ್‌ಗೆ ತೆರಳಿದ್ದ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು, ನಟಿ ತ್ರಿಷಾ ಜತೆ ತೆಗೆಸಿಕೊಂಡ ಸೆಲ್ಫಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತ್ರಿಷಾ ಧರಿಸಿರುವ ನೆಕ್ಲೇಸ್‌ನ ಲಾಕೆಟ್‌ ಭಾಗವನ್ನು ಮುಚ್ಚುವಂತೆ ಅಥವಾ ಕಾಣದಂತೆ ಅದರ ಮೇಲೆ ಲವ್ ಎಮೋಜಿ ಹಾಕಲಾಗಿದೆ.
Trisha Krishnan
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್
Published on: 

ಚೆನ್ನೈ: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸಖತ್​ ಸುದ್ದಿಯಾಗುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ( Trisha Krishnan ), ಇದೀಗ ತಮ್ಮ ವೈಯಕ್ತಿಕ ವಿಷಯಕ್ಕಾಗಿ ಮತ್ತೊಮ್ಮೆ ಸಖತ್​ ಚರ್ಚೆಯಲ್ಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತ್ರಿಷಾ ಅವರ ಮದುವೆ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ. ಅದಕ್ಕೆ ಕಾರಣ ತ್ರಿಷಾ ಅವರು ಧರಿಸಿರುವ ನೆಕ್ಲೇಸ್‌ ಹಾಗೂ ಲಾಕೆಟ್‌ ಮೇಲಿನ ನಿಗೂಢ ಲವ್ ಎಮೋಜಿ. ಈ ಒಂದು ಲಾಕೆಟ್​ ಇಡೀ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಸಿನಿಮಾ ಶೂಟಿಂಗ್ ನಿಮಿತ್ತ ಲಂಡನ್‌ಗೆ ತೆರಳಿದ್ದ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು, ನಟಿ ತ್ರಿಷಾ ಜತೆ ತೆಗೆಸಿಕೊಂಡ ಸೆಲ್ಫಿಯೊಂದನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ತ್ರಿಷಾ ಧರಿಸಿರುವ ನೆಕ್ಲೇಸ್‌ನ ಲಾಕೆಟ್‌ ಭಾಗವನ್ನು ಮುಚ್ಚುವಂತೆ ಅಥವಾ ಕಾಣದಂತೆ ಅದರ ಮೇಲೆ ಲವ್ ಎಮೋಜಿ ಹಾಕಲಾಗಿದೆ. ಇದನ್ನು ಗಮನಿಸಿದ ಸಿನಿ ಅಭಿಮಾನಿಗಳು, ತ್ರಿಷಾ ಮದುವೆ ಆಗಿದ್ದಾರಾ? ಅವರು ತಮ್ಮ ವಿಶೇಷ ಲಾಕೆಟ್ ಅನ್ನು ಮುಚ್ಚಿಕೊಳ್ಳುತ್ತಿರುವುದು ಯಾಕೆ? ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸದ್ಯ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಿಗೂಢ ಲಾಕೆಟ್​ ಎಲ್ಲರ ಕೇಂದ್ರಬಿಂದುವಾಗಿದೆ.

Also Read
ನಿಮ್ಮ ಹೆದರಿಕೆಗೆ ಬಗ್ಗಲ್ಲ... ಗಾಯದ ವಿಡಿಯೋ ಶೇರ್​ ಮಾಡಿ ಮುಂಬೈ ಪೊಲೀಸರಿಗೆ ಆಮೀರ್ ಖಾನ್ ಸೋದರ ಸೊಸೆ ತಿರುಗೇಟು! Zayn Marie Khan
Trisha Krishnan

ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ಅವರೊಂದಿಗೆ ತ್ರಿಷಾ ಹೆಸರು ಥಳಕು ಹಾಕಿಕೊಂಡು ಸಾಕಷ್ಟು ವಿವಾದಗಳು ಮತ್ತು ವಾದ-ಪ್ರತಿವಾದಗಳು ಹುಟ್ಟಿಕೊಂಡಿದ್ದವು. ವಿಜಯ್​ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಡಿವೋರ್ಸ್​ಗೆ ಅರ್ಜಿ ಹಾಕಿದ್ದಾರೆ ಎಂಬ ಸುದ್ದಿಯು ಕೆಲಕಾಲ ಜೋರು ಚರ್ಚೆ ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ, ಪ್ರಸ್ತುತ ವೈರಲ್ ಆಗಿರುವ ಫೋಟೋದಲ್ಲಿ ಆ ಲಾಕೆಟ್ ಒಳಗೆ ಏನಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ. ವಿಜಯ್​ ಜತೆಗಿನ ನಂಟು ಈಗಲೂ ಮುಂದುವರಿದಿದ್ದು, ನಟಿಯು ಉದ್ದೇಶಪೂರ್ವಕವಾಗಿಯೇ ತಮ್ಮ ಕೊರಳಿನ ಆಭರಣವನ್ನು ಮುಚ್ಚಿಕೊಳ್ಳುತ್ತಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಅಂದಹಾಗೆ, ತ್ರಿಷಾ ಅವರ ಲಾಕೆಟ್‌ ಚರ್ಚೆಗೆ ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಕೆಲ ತಿಂಗಳುಗಳ ಹಿಂದೆ 'ಥಗ್ ಲೈಫ್' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗಲೂ ಅವರು ಧರಿಸಿದ್ದ ವಿಶಿಷ್ಟ ಚಿನ್ನದ ಬಣ್ಣದ ಅಲೈಲಾ (Alila) ಆಕಾರದ ಲಾಕೆಟ್ ಭಾರಿ ಚರ್ಚೆಗೆ ಕಾರಣವಾಗಿತ್ತು. ಸಾರ್ವಜನಿಕ ಸಮಾರಂಭಗಳಲ್ಲಿ ಹಾಗೂ ಸೆಲ್ಫಿಗಳಲ್ಲಿ ತ್ರಿಷಾ ಅವರು ಧರಿಸುವ ಆಭರಣಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿರುತ್ತದೆ. ಏಕೆಂದರೆ, ಅವರು ಧರಿಸುವ ವಸ್ತುಗಳು ಅವರ ಮದುವೆ ಅಥವಾ ಗೌಪ್ಯ ಸಂಬಂಧದ ಸುಳುವಿರಬಹುದು ಎಂದು ನೆಟ್ಟಿಗರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುತ್ತಿರುತ್ತಾರೆ.

Also Read
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ಕೊನೇ ಕ್ಷಣದಲ್ಲಿ ರದ್ದು: ಪ್ರಭಾವಿ ರಾಜಕಾರಣಿಯೊಬ್ಬರ ಪೋನ್ ಕರೆಗೆ ಮಣಿದ್ರಾ ಪೊಲೀಸರು? Prajwal Revanna
Trisha Krishnan

ಹೀಗೆ ಪದೇಪದೆ ವಿವಾದಗಳು ಮತ್ತು ಮದುವೆ ಸುದ್ದಿಗಳು ಮುನ್ನೆಲೆಗೆ ಬರುತ್ತಿದ್ದರೂ ನಟಿ ತ್ರಿಷಾ ಕೃಷ್ಣನ್ ಮಾತ್ರ ತಮ್ಮ ಮದುವೆ ಅಥವಾ ವೈಯಕ್ತಿಕ ಬಾಂಧವ್ಯದ ಇಂದಿಗೂ ತುಟಿ ಬಿಚ್ಚದೇ ಮೌನವಾಗಿದ್ದಾರೆ. ಇತ್ತೀಚಿನ ಈ ಲಂಡನ್ ಸೆಲ್ಫಿ ಫೋಟೋದ ಗುಟ್ಟು ಕೂಡ ಊಹಾಪೋಹಗಳಾಗಿಯೇ ಉಳಿದಿದ್ದು, ನಟಿಯ ಮದುವೆಯ ಕುರಿತು ಅಭಿಮಾನಿಗಳ ವಲಯದಲ್ಲಿ ಎದ್ದಿರುವ ಕುತೂಹಲಕ್ಕೆ ಮುಂದಿನ ದಿನಗಳಲ್ಲಿ ಸ್ವತಃ ನಟಿಯೇ ತೆರೆ ಎಳೆಯಲಿದ್ದಾರಾ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net