ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಬೆಂಗಳೂರಿನಲ್ಲಲ್ಲ...ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ

Chiru Sarja 7 June 20
Published on

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 11ಗಂಟೆಗೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಅದಕ್ಕೂ ಮೊದಲು ಅವರ ಬೆಂಗಳೂರಿನ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುವುದು ಎನ್ನಲಾಗಿದೆ.

ಬನಶಂಕರಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಅವರ ತಾತ ಶಕ್ತಿ ಪ್ರಸಾದ್​ ಮತ್ತು ಮಾವ ಕಿಶೋರ್​ ಸರ್ಜಾ ಅಂತ್ಯಸಂಸ್ಕಾರ ನಡೆದ ಜಕ್ಕೇನಹಳ್ಳಿಯಲ್ಲಿಯೇ ನಡಿದಿದ್ದು, ಇದೀಗ ಚಿರು ಅಂತಿಮ ಸಂಸ್ಕಾರವೂ ಅಲ್ಲೇ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಚಿರಂಜೀವಿ ಸರ್ಜಾ ಅವರ ಮಾವ, ಅರ್ಜುನ್​ ಸರ್ಜಾ ಚೆನ್ನೈನಿಂದ ಈಗಾಗಲೇ ಹೊರಟಿದ್ದು, ಕೆಲವೇ ಘಂಟೆಗಳಲ್ಲಿ ಬೆಂಗಳೂರು ತಲುಪಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net