ನಟ ಚಿರು ಮೃತದೇಹಕ್ಕೆ ಕೊವಿಡ್​ -19 ಟೆಸ್ಟ್; ಗಂಟಲು ದ್ರವದ ಮಾದರಿ ಸಂಗ್ರಹ

Photo
Published on

ಚಿಕ್ಕವಯಸ್ಸಿನ, ಸದಾ ಲವಲವಿಕೆಯಿಂದ ಇರುತ್ತಿದ್ದ ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ಒಳಗಾಗಿದ್ದಾರೆ. ಅವರ ಅನಾರೋಗ್ಯವೇ ಮೃತ್ಯುವಾಗಿ ಪರಿಣಮಿಸಿದೆ.

ಇಂದು ಊಟ ಮಾಡುತ್ತಿದ್ದ ಚಿರುಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಆದರೆ ಚಿರುಗೆ ಇದು ಮೊದಲಲ್ಲ. ಕಳೆದ ಎರಡು ದಿನಗಳ ಹಿಂದೆ ಕೂಡ ಲಘು ಹೃದಯಾಘಾತವಾಗಿತ್ತು ಎಂಬ ಮಾಹಿತಿಯೂ ಸಿಕ್ಕಿದೆ. ಆದರೆ ಇದರೊಂದಿಗೆ ಇನ್ನೂ ಒಂದು ಮಾಹಿತಿ ಲಭ್ಯವಾಗಿದೆ.

ಚಿರು ಅವರಿಗೆ ಮೂರ್ನಾಲ್ಕು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. 3 ದಿನಗಳ ಹಿಂದೆ ಬ್ರೇನ್​ ಸ್ಟ್ರೋಕ್​ ಆಗಿ, ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಲ್ಲದೆ, ಮೂರು ಸಲ ಪಿಟ್ಸ್​ ಕಾಣಿಸಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.
ಇಂದು ಒಮ್ಮೆಲೆ ಉಸಿರಾಟ ತೊಂದರೆ ಕಾಣಿಸಿಕೊಂಡು, ಹೃದಯಾಘಾತದಿಂದ ಮೃತಪಟ್ಟ ಚಿರು ಸರ್ಜಾ ಅವರ ಗಂಟಲು ದ್ರವದ ಮಾದರಿಯನ್ನು ಕೊವಿಡ್​-19 ಟೆಸ್ಟ್​ಗೆ ಒಳಪಡಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಚಿರು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದಾರೆ.

ಚಿರಂಜೀವಿ ಮೃತದೇಹವನ್ನು ಕಿಮ್ಸ್​ಗೆ ಸ್ಥಳಾಂತರಿಸಲಾಗುವುದು. ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net