ನಟ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಇನ್ನು, ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರದ ಕೆಲಸಗಳು ದೊಡ್ಡ ಮಟ್ಟದಲ್ಲೇ ನಡೆಯುತ್ತಿವೆ. ಇತ್ತೀಚೆಗೆ, ತಾನೆ ಪ್ರಚಾರ ಕಾರ್ಯದ ಒಂದು ಮ್ಯಾಪ್ ಅನ್ನು ನಿರ್ದೇಶಕ ಅನೂಪ್ ಭಂಡಾರಿ ಬಿಡುಗಡೆ ಮಾಡಿದ್ದರು. ಇದೀಗ. ಈ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಸಿನಿಮಾವನ್ನು ಬೆಂಬಲಿಸೋಕೆ ಪರಭಾಷೆಯ ಸ್ಟಾರ್ ನಟರಾದ ನಟ ಮೋಹನ್ ಲಾಲ್, ನಟ ಮೆಗಾಸ್ಟಾರ್ ಚಿರಂಜೀವಿ, ನಟ ಸಿಂಬು ಕೈಜೋಡಿಸಿದ್ದಾರೆ.