ಅರ್ಬನ್​ ಮಾಂಕ್​ ಅವತಾರದಲ್ಲಿರುವ ಈ ನಟ ಯಾರು ಹೇಳಿ ನೋಡೋಣ?

Chiranjeevi - Final
Published on

ಹೈದರಾಬಾದ್ಸಿ​: ನಿಮಾ ನಟ-ನಟಿಯರು ತಮ್ಮ ಪಾತ್ರಗಳಿಗಾಗಿ ಹೊಸ ಹೊಸ ಗೆಟಪ್​ಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಟಾಲಿವುಡ್​ನ ಜನಪ್ರಿಯ ನಟರೊಬ್ಬರು, ತಮ್ಮ ಮುಂದಿನ ಚಿತ್ರಕ್ಕಾಗಿ ಒಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

ಅಂದಹಾಗೆ, ಆ ಜನಪ್ರಿಯ ನಟ ಯಾರು ಗೊತ್ತಾ? ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ. 'ಆಚಾರ್ಯ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ಅವರು, ಲಾಕ್​ಡೌನ್​ ಸಮಯದಲ್ಲಿ ಇನ್ನೂ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಂದು ತಮಿಳಿನ 'ವೇದಾಳಂ' ರೀಮೇಕ್​. ಇನ್ನೊಂದು ಮಲಯಾಳಂನ 'ಲೂಸಿಫರ್​' ರೀಮೇಕ್​. ಈ ಎರಡೂ ಚಿತ್ರಗಳನ್ನು ಚಿರಂಜೀವಿ ಒಪ್ಪಿಕೊಂಡಿದ್ದು, 'ಆಚಾರ್ಯ' ಮುಗಿಸಿದ ಮೇಲೆ ಈ ಚಿತ್ರಗಳಲ್ಲಿ ನಟಿಸಲಿದ್ದಾರೆ.

ಈ ಮಧ್ಯೆ, ಚಿರಂಜೀವಿ ಶುಕ್ರವಾರ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಲೆ ಬೋಳಿಸಿಕೊಂಡಿರಬಹುದೇನೋ ಎಂದನಿಸುವುದು ಸಹಜ. ಹಾಗೇನಿಲ್ಲ, ಪ್ರಾಸ್ಥೆಟಿಕ್​ ಮೇಕಪ್​ ಮೂಲಕ ಬಾಲ್ಡ್​ ಲುಕ್​ನಲ್ಲಿ ಚಿರಂಜೀವಿ ಅವರು ಕಾಣಿಸಿಕೊಂಡಿದ್ದಾರೆ. ಈ ಲುಕ್​ ಯಾವ ಚಿತ್ರಕ್ಕೆ ಎಂದು ಅವರು ಹೇಳಿಲ್ಲ. ಆದರೆ, ಇನ್​ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿರುವ ಅವರು, 'ಅರ್ಬನ್​ ಮಾಂಕ್​. ನಾನು ಸನ್ಯಾಸಿಯ ತರಹ ಯೋಚಿಸುವುದಕ್ಕೆ ಸಾಧ್ಯವಾ?' ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.

ಚಿರಂಜೀವಿ ಅವರನ್ನು ಇಂಥದ್ದೊಂದು ಗೆಟಪ್​ನಲ್ಲಿ ನೋಡಿರುವವರೆಲ್ಲಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅವರ ಮಗ ರಾಮ್​ಚರಣ್​ ತೇಜ ಸಹ, 'ಅಪ್ಪಾ, ಇದೇನಿದು' ಎಂದು ಕೇಳಿದ್ದಾರೆ.

ಒಟ್ಟಾರೆ ಚಿರಂಜೀವಿ ಅವರ ಈ ಅರ್ಬನ್​ ಮಾಂಕ್​ ಅವತಾರ, ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಹವಾ ಎಬ್ಬಿಸಿದೆ. ಇಷ್ಟಕ್ಕೂ ಈ ಅವತಾರ ಯಾವ ಚಿತ್ರಕ್ಕಿರಬಹುದು? ಈ ವಿಷಯವನ್ನು ಮಾತ್ರ ಚಿರಂಜೀವಿ ಬಹಿರಂಗಪಡಿಸುವುದಕ್ಕೆ ಸಿದ್ಧರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net