ಆಚಾರ್ಯಗೆ ರಶ್ಮಿಕಾ? ರಾಮ್​ಚರಣ್ ಜತೆಗೆ ಗುಳಿಕೆನ್ನೆ ಹುಡುಗಿ

Rashmika Mandanna - Final
Published on

ಲಾಕ್​ಡೌನ್ ಸಮಯದಲ್ಲಿ ಟಾಲಿವುಡ್​ನಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದ ಚಿತ್ರವೆಂದರೆ ಅದು ಚಿರಂಜೀವಿ ಅಭಿನಯದ ‘ಆಚಾರ್ಯ’. ಕಳೆದ ನಾಲ್ಕು ತಿಂಗಳುಗಳಲ್ಲಿ ಈ ಚಿತ್ರದ ಕುರಿತು ಹಲವು ಅಂತೆ-ಕಂತೆಗಳು ಕೇಳಿ ಬಂದಿವೆ ಮತ್ತು ಇನ್ನೂ ಕೇಳಿ ಬರುತ್ತಲೇ ಇವೆ. ಆದರೆ, ಚಿತ್ರತಂಡದವರು ಮಾತ್ರ ಈ ಸುದ್ದಿಗಳಿಗೂ ಹೂಂ ಎಂದಿಲ್ಲ. ಹಾಗೆಯೇ ಉಹೂಂ ಅಂತಲೂ ಹೇಳಿಲ್ಲ.

ಹೊಸ ಸುದ್ದಿಯೇನೆಂದರೆ, ರಶ್ಮಿಕಾ ಮಂದಣ್ಣ ಸಹ ಈ ಚಿತ್ರದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಚಿರಂಜೀವಿ ನಾಯಕನಾಗಿ ನಟಿಸಿದರೆ, ಅವರ ಮಗ ರಾಮ್ರಣ್ ತೇಜಗೆ ಸಹ ಒಂದು ಚಿಕ್ಕ ಮತ್ತು ಪ್ರಮುಖ ಪಾತ್ರವಿದೆಯಂತೆ. ರಾಮ್ರಣ್ ಜೋಡಿಯಾಗಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್​ನಲ್ಲಿ ಹರಿದಾಡುತ್ತಿದೆ.

ಎಂದಿನಂತೆ ಈ ಸುದ್ದಿಯೂ ನಿಜವೋ, ಸುಳ್ಳೋ ಎಂದು ಚಿತ್ರತಂಡದವರು ಹೇಳಿಕೊಂಡಿಲ್ಲ. ಹಾಗಂತ ಸುದ್ದಿ ಸುಳ್ಳು ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ, ಈಗಾಗಲೇ ರಶ್ಮಿಕಾ, ‘ಸರಿಲೇರು ನೀಕ್ಕೆವರು’ ಚಿತ್ರದಲ್ಲಿ ಮಹೇಶ್ ಬಾಬು ಜತೆಗೆ ಮತ್ತು ‘ಪುಷ್ಪಾ’ದಲ್ಲಿ ಅಲ್ಲು ಅರ್ಜುನ್ ಜತೆಗೆ ನಟಿಸಿದ್ದಾರೆ. ಟಾಲಿವುಡ್​ನ ಇಬ್ಬರು ಜನಪ್ರಿಯ ಹೀರೋಗಳ ಜತೆಗೆ ನಟಿಸಿರುವ ಅವರಿಗೆ, ಸಹಜವಾಗಿಯೇ ಡಿಮಾಂಡ್ ಹೆಚ್ಚಿದ್ದು, ಈಗ ರಾಮ್ರಣ್ ಜೋಡಿಯಾಗಿ ನಟಿಸುವುದಕ್ಕೆ ಅವಕಾಶ ಬಂದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ, ಶಂಖದಿಂದ ಇನ್ನೂ ತೀರ್ಥ ಬಂದಿಲ್ಲವಾದ್ದರಿಂದ, ‘ಆಚಾರ್ಯ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಾರೋ, ಇಲ್ಲವೋ ಎಂಬ ವಿಷಯ ಗೊತ್ತಾಗುವುದಕ್ಕೆ ಇನ್ನಷ್ಟು ದಿನ ಕಾಯಬೇಕಾದರೆ ಆಶ್ಚರ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net