More

    ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

    ಬೆಂಗಳೂರು: ಸ್ಯಾಂಡಲ್‌ವುಡ್ ಮಾದಕ ದ್ರವ್ಯ ದಂಧೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರು ನಟಿಯರು ಸೇರಿ ಆರು ಮಂದಿಯನ್ನು ಗುರುವಾರ ಪೊಲೀಸರು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಗೆ (ಡೋಪಿಂಗ್ ಟೆಸ್ಟ್) ಒಳಪಡಿಸಿದರು.

    ಗುರುವಾರ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ತಂಡ ಸಂಜನಾ ಮತ್ತು ರಾಗಿಣಿ ಸೇರಿ 6 ಆರೋಪಿಗಳನ್ನು ಮಲ್ಲೇಶ್ವರದ ಕೆ. ಸಿ.ಜನರಲ್ ಆಸ್ಪತ್ರೆಗೆ ಕರೆತಂದು ಡೋಪಿಂಗ್ ಟೆಸ್ಟ್ ನಡೆಸಲು ಮುಂದಾಗಿದ್ದರು. ಆಗ ಸಂಜನಾ, ‘ನನ್ನ ಬಕ್ರಾ ಮಾಡಿ ಪರೀಕ್ಷೆಗೆ ಕರೆದಿದ್ದೀರಾ’ ಎಂದು ಕಿರಿಕಿರಿ ಮಾಡಿದ್ದಾಳೆ. ‘ಪರೀಕ್ಷೆಗೆ ಒಳಗಾಗದೆ ಹೋದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದಾಗ ಸುಮ್ಮನಾಗಿ ರಕ್ತ ಮಾದರಿ ನೀಡಿದ್ದಾಳೆ.

    ಇದನ್ನೂ ಓದಿ: ನಟಿಯರಿಬ್ಬರಿಗೂ ಡೋಪಿಂಗ್​ ಟೆಸ್ಟ್​; ಅತ್ತುಅತ್ತು ಸುಸ್ತಾದ ಸಂಜನಾಗೆ ರಾಗಿಣಿ ಸಾಂತ್ವನ

    ನಟಿ ರಾಗಿಣಿ ಸೇರಿ ಇತರ ಆರೋಪಿಗಳು ಯಾವುದೇ ಕಿರಿಕ್ ಇಲ್ಲದೆ ಪರೀಕ್ಷೆಗೊಳಗಾಗಿದ್ದಾರೆ. ಸಂಜನಾ, ‘ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರಿಗೋ ಕಾಲ್ ಮಾಡಿದರೇ. ಅವರು ಮತ್ಯಾರಿಗೋ ಫೋನ್ ಮಾಡಿದರೇ ನನಗೂ ಅವರಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾಳೆ. ನಟಿಗೆ ಮೃದು ಮಾತಿನಲ್ಲೇ ಇನ್‌ಸ್ಪೆಕ್ಟರ್ ಪುನೀತ್ ತಿಳಿ ಹೇಳಲು ಯತ್ನಿಸಿದ್ದಾರೆ.

    ಇದನ್ನೂ ಓದಿ:  ಕೋಳಿಶೆಡ್​ನಲ್ಲಿ ಬಚ್ಚಿಟ್ಟಿದ್ರು 1,352 ಕೆಜಿ ಗಾಂಜಾ, ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಿ!

    ಅವರ ಮಾತಿಗೆ ಜಗ್ಗದ ಸಂಜನಾ, ‘ಸಾಹೇಬ್ರೇ ನನ್ನ ಮಾತನ್ನು ಕೇಳಿಸಿಕೊಳ್ಳಿ. ನನ್ನನ್ನು ಬಕ್ರಾ ಮಾಡಿ ಪರೀಕ್ಷೆಗೆ ಕರೆತಂದಿದ್ದೀರಾ’ ಎಂದು ಕಿರಿಕ್ ತೆಗೆದಿದ್ದಾಳೆ. ‘ನಾವು ಡೋಪಿಂಗ್ ಟೆಸ್ಟ್‌ಗೆ ಕೋರ್ಟ್ ಅನುಮತಿ ಪಡೆದಿದ್ದೇವೆ’ ಎಂದು ಪೊಲೀಸರು ಹೇಳಿದರೂ ರಂಪಾಟ ನಿಲ್ಲಿಸಿಲ್ಲ. ‘ವೈದ್ಯಕೀಯ ಪರೀಕ್ಷೆಗೊಳಗಾಗುವುದು ಬಿಡುವುದು ನನ್ನ ಮೂಲಭೂತ ಹಕ್ಕು. ನನಗೆ ನನ್ನ ಲಾಯರ್ ಹೇಳಿದ್ದಾರೆ ಎಂದು ಮತ್ತೆ ಪ್ರಶ್ನಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಹೀಗೆ ಸಂಜನಾ ರಂಪಾಟ ಮಾಡಿದ್ದಾಳೆ.

    ಇದನ್ನೂ ಓದಿ: ಡ್ರಗ್ಸ್​ ದಂಧೆ ಪ್ರಕರಣ; ಆಪ್ತನ ಮೂಲಕವೇ ಜಮೀರ್ ಅಹ್ಮದ್​ಗೆ ಸಂಕಷ್ಟ ಎದುರಾಗುತ್ತಾ?

    ಡೋಪಿಂಗ್ ಟೆಸ್ಟ್ ಮುಗಿದ ಬಳಿಕ ಸಂಜನಾ ಮಧ್ಯಾಹ್ನದ ಊಟಕ್ಕೆ ನಾನ್‌ವೆಜ್‌ಗೆ ನೀಡುವಂತೆ ಮನವಿ ಮಾಡಿದ್ದಳು ಎನ್ನಲಾಗಿದೆ. ಅದಕ್ಕೆ ಸಮ್ಮತಿಸಿದ ಅಧಿಕಾರಿಗಳು ಚಿಕನ್ ಬಿರಿಯಾನಿ ನೀಡಿದ್ದಾರೆ. ಎಲ್ಲ ಆರೋಪಿಗಳಿಗೂ ನಾನ್‌ವೆಜ್ ಊಟ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

    ವಿಸ್ತರಣೆಯಾಯ್ತು ಮಾರಟೋರಿಯಂ: ಸಾಲಗಾರರನ್ನು ಪೀಡಿಸಬೇಡಿ ಎಂದ ಸುಪ್ರೀಂಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts