ನಟಿಯರಿಬ್ಬರಿಗೂ ಡೋಪಿಂಗ್​ ಟೆಸ್ಟ್​; ಅತ್ತುಅತ್ತು ಸುಸ್ತಾದ ಸಂಜನಾಗೆ ರಾಗಿಣಿ ಸಾಂತ್ವನ

Sanjana Galrani And Ragini
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಸಿಲುಕಿರುವ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಇಂದು ಡೋಪಿಂಗ್​ ಟೆಸ್ಟ್​ ಮಾಡಲಾಗಿದೆ.

ಇವರೊಂದಿಗೆ ರಾಹುಲ್​, ಪ್ರಶಾಂತ್​ ರಾಂಕಾ, ಲೂಮ್​ ಪೆಪ್ಪರ್​, ನಿಯಾಜ್​​ರನ್ನೂ ಕೂಡ ಡೋಪಿಂಗ್​ ತಪಾಸಣೆಗೆ ಒಳಪಡಿಸಲಾಗಿದೆ.

ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಎಲ್ಲರಿಗೂ ಡೋಪಿಂಗ್​ ಟೆಸ್ಟ್​ ಮಾಡಲಾಗಿದೆ. ಆದರೆ ನಟಿ ಸಂಜನಾ ಟೆಸ್ಟ್​ ಮಾಡಿಸಿಕೊಳ್ಳೋದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ನಂತರ ಪೊಲೀಸರು ಸಂಜನಾರನ್ನು ಸಮಾಧಾನ ಮಾಡಿ ಟೆಸ್ಟ್​ ಮಾಡಿಸಿದ್ದಾರೆ. ಇವರೆಲ್ಲರ ರಕ್ತ, ಮೂತ್ರ, ಉಗುರುಗಳನ್ನು ಸಂಗ್ರಹಿಸಿಲಾಗಿದೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ಯಾರೇ ಇದ್ರೂ ಕಾನೂನು ಪ್ರಕಾರವೇ ಕ್ರಮ- ಗೃಹ ಸಚಿವ ಬೊಮ್ಮಾಯಿ

ಅಳುತ್ತಿದ್ದ ಸಂಜನಾರನ್ನು ರಾಗಿಣಿ ಸಂತೈಸಿದ್ದಾರೆ. ನಂತರ ಇವರಿಬ್ಬರನ್ನೂ ಮಡಿವಾಳದ ಎಫ್​​ಎಸ್​​ಎಲ್​ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net