

ಬೆಂಗಳೂರು: ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಮತ್ತು ‘ವೀಕ್ ಎಂಡ್’ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಮಿಲಿಂದ್ ಗೌತಮ್ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ೋಷಣೆಯಾಗಿತ್ತು. ಇದೀಗ ನಟ ಉಪೇಂದ್ರ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಚಿತ್ರಕ್ಕೆ ‘ಹುಲಿ ನಾಯಕ’ ಎಂದು ನಾಮಕರಣ ಮಾಡಲಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಚಿತ್ರದ ಟೈಟಲ್ ರಿಲೀಸ್ ಮಾಡಲಾಗಿದ್ದು, ಇದೊಂದು ಐತಿಹಾಸಿಕ ಚಿತ್ರವಾಗಿದ್ದು ಸಿಂಧೂರ ವೀರ ಲಕ್ಷ್ಮಣ ನಾಯಕನ ಜೀವನಾಧಾರಿತ ಸಿನಿಮಾ ಎನ್ನಲಾಗಿದೆ.
ಸದ್ಯ ಮಿಲಿಂದ್ ಗೌತಮ್ ‘ಅನ್‌ಲಾಕ್ ರಾಘವ’ ಚಿತ್ರದಲ್ಲಿ ಬಿಜಿಯಿದ್ದು, ಮತ್ತೊಂದೆಡೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ‘ಪಾದರಾಯ’ ಚಿತ್ರದ ಕೆಲಸಗಳಲ್ಲಿ ತೊಡಗಿದ್ದಾರೆ. ಹೀಗಾಗಿಯೇ ಸೆಪ್ಟೆಂಬರ್‌ನಲ್ಲಿ ಸಿನಿಮಾ ಲಾಂಚ್ ಮಾಡುವ ಆಲೋಚನೆ ಚಿತ್ರತಂಡದ್ದು.