ಐ ಆಮ್​ ಇನ್​ ಲವ್​ ... ಯಾರ ಜತೆಗೆ ಅಂತ ಕೇಳಬೇಡಿ!

Chaitra Kotoor - Final
Published on

ಕಳೆದ ವರ್ಷದ 'ಬಿಗ್​ ಬಾಸ್​'ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದವರು ನಟಿ ಚೈತ್ರಾ ಕೋಟೂರು. 'ಬಿಗ್​ ಬಾಸ್​' ಮನೆಯಲ್ಲಿ ಇರುವಷ್ಟು ದಿನ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾಗಿದ್ದ ಅವರು, ಕಾರ್ಯಕ್ರಮ ಮುಗಿದ ನಂತರ ಹೆಚ್ಚು ಸುದ್ದಿಯಾಗಲಿಲ್ಲ.

ಇದೀಗ ಚೈತ್ರಾ ಕೊಟೂರು, ಬಹಳ ದಿನಗಳ ನಂತರ ಒಂದಿಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ಏನು ಮಾಡಿದ್ದಾರೆ ಎಂಬ ಪ್ರಶ್ನೆ ಬಂತಾ? ಉತ್ತರ ಇಲ್ಲಿದೆ.

ಚೈತ್ರಾ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಒಂದು ಪೋಸ್ಟ್​ ಹಾಕಿದ್ದಾರೆ. 'ಐ ಆಮ್​ ಇನ್​ ಲವ್​ ... ಯಾರ ಜತೆಗೆ ಅಂತ ಕೇಳಬೇಡಿ. ಐ ಕಾಂಟ್​ ಡಿಸ್​ಕ್ಲೋಸ್​ ಇಟ್​ ನವ್​' ಎಂದು ಅವರು ಬರೆದುಕೊಂಡಿದ್ದಾರೆ.

ಯಾವಾಗ ಚೈತ್ರಾ ಇಂಥದ್ದೊಂದು ಮೆಸೇಜ್​ ಬಿಟ್ಟರೋ, ಆಗ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಚೈತ್ರಾ ಯಾರನ್ನು ಪ್ರೀತಿಸುತ್ತಿದ್ದಾರೆ ಎಂಬ ಹುಳ ಅವರ ಮೆದುಳನ್ನು ತಿಂದು ಹಾಕಿದೆ. ಆದರೆ, ಚೈತ್ರಾ ಅವರೇ, ಹೆಚ್ಚಿನ ವಿಷಯಗಳನ್ನು ಈಗ ಹೇಳಲು ಸಾಧ್ಯವಿಲ್ಲ ಎಂದು ಹೇಳಿರುವುದರಿಂದ, ಬೇರೆ ದಾರಿ ಇಲ್ಲದೆ ಸುಮ್ಮನಾಗಿದ್ದಾರೆ.

ಹಾಗಾದರೆ, ಅವರು ತಮ್ಮ ಪ್ರೀತಿಯ ವಿಷಯವನ್ನು ಯಾವಾಗ ಬಹಿರಂಗಪಡಿಸುತ್ತಾರೆ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ಅವರು ಉತ್ತರಿಸುವವರೆಗೂ ಅಭಿಮಾನಿಗಳು ಸುಮ್ಮನೆ ಕಾಯದೇ ವಿಧಿಯಿಲ್ಲ.

ಹರಿಪ್ರಿಯಾ ಅಭಿನಯದ 'ಸೂಜಿದಾರ' ಚಿತ್ರದಲ್ಲಿ ನಟಿಸಿದ್ದ ಚೈತ್ರಾ, ಆ ನಂತರ 'ಬಿಗ್​ ಬಾಸ್​' ಮನೆಗೆ ಬಂದರು. ಅಲ್ಲಿಂದ ಬಂದು ಕೆಲವೇ ದಿನಗಳಲ್ಲಿ ಲಾಕ್​ಡೌನ್​ ಘೋಷಣೆಯಾಯಿತು. ಲಾಕ್​ಡೌನ್​ ಮುಗಿದು, ಚಿತ್ರೀಕರಣ ಚಟುವಟಿಕೆಗಳೆಲ್ಲಾ ಪ್ರಾರಂಭವಾದ ಮೇಲೆ, ಅವರ ಮುಂದಿನ ಹೆಜ್ಜೆ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net