ಸುಶಾಂತ್ ಕೇಸ್: ರಿಯಾ, ಶೌವಿಕ್​ಗೆ ಮಂಪರು ಪರೀಕ್ಷೆ?

Rhea-Chakraborty-Final-1
Published on

ಸುಶಾಂತ್ ಸಿಂಗ್ ರಜಪೂತ್ ಕೇಸ್‍ನಲ್ಲಿ ಸತತವಾಗಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರನನ್ನು ಗ್ರಿಲ್ ಮಾಡುತ್ತಿದೆ ಸಿಬಿಐ. ಈಗಾಗಲೇ ಶುಕ್ರವಾರ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದ ಸಿಬಿಐ, ಇಂದು ಸಹ ಡಿಆರ್‍ಡಿಓ ಹೌಸ್‍ಗೆ ವಿಚಾರಣೆಗೆಂದು ಕರೆಸಿಕೊಂಡಿದೆ.

ಈ ಮಧ್ಯೆ, ಸುಶಾಂತ್ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಿಕೊಂಡಿರುವ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಮುಂತಾದವರನ್ನು ಪಾಲಿಗ್ರಾಫ್ ಟೆಸ್ಟ್‍ಗೆ ಗುರಿಪಡಿಸಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಈ ಕುರಿತು ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ಇಲ್ಲದಿದ್ದರೂ, ರಿಯಾ ಮತ್ತು ಇತರರ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತಿರುವ ಕಾರಣ, ನಿಜಾಂಶ ತಿಳಿಯುವುದಕ್ಕೆ ಈ ಅಸ್ತ್ರವನ್ನು ಸಿಬಿಐ ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಹಾಗೇನಾದರೂ ಆದರೆ, ಸದ್ಯದಲ್ಲೇ ರಿಯಾ, ಶೌವಿಕ್ ಮುಂತಾದವರನ್ನು ದೆಹಲಿಗೆ ಕರೆಸಿಕೊಂಡು, ಅಲ್ಲಿ ಪ್ರಯೋಗಾಲಯದಲ್ಲಿ ಅವರ ಮೇಲೆ ಪಾಲಿಗ್ರಾಫ್ ಟೆಸ್ಟ್ ನೆಡಸಲಾಗುತ್ತದಂತೆ.

ಈ ಮಧ್ಯೆ, ಮಾಧ್ಯಮದವರಿಂದ ತಮಗೆ ರಕ್ಷಣೆ ಕೊಡಬೇಕು ಎಂದು ರಿಯಾ ಮತ್ತು ಇತರರು ಮುಂಬೈನ ಸಾಂತಾಕ್ರೂಜ್‍ನ ಪೊಲೀಸರ ಮೊರೆಹೋದ ಕಾರಣ, ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net