ಹೈದರಾಬಾದ್: ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರ ''ಪುಷ್ಪ: ದಿ ರೈಸ್'' ಡಿ.17 ರಂದು ತೆರೆಕಾಣಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆಗೆ ಮುಂಚಿತವಾಗಿ, ''ಪುಷ್ಪ: ದಿ ರೈಸ್'' ಒಂದು ನೆಗೆಟಿವ್ ಕಾರಣಕ್ಕೆ ಸುದ್ದಿಯಲ್ಲಿದೆ. ಹೌದು, ಕೆಲವು ದಿನಗಳ ಹಿಂದೆ ''ಪುಷ್ಪ: ದಿ ರೈಸ್'' ಚಿತ್ರದ ನಿರ್ಮಾಪಕರು ಚಿತ್ರದ ಐಟಂ ಹಾಡು, ''ಹೂಂ ಅಂತೀರಾ - ಊಹೂ ಅಂತೀರಾ'' ಲಿರಿಕಲ್ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. 3.43 ನಿಮಿಷದ ಈ ಹಾಡು ಬಹುತೇಕ ಎಲ್ಲಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದು, ಕೇವಲ 24 ಗಂಟೆಗಳಲ್ಲಿ ಐದೂ ಭಾಷೆಗಳಲ್ಲಿ ಸೇರಿಸಿ 20 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ನಟಿ ಸಮಂತಾಳ ಮಾದಕ ಲುಕ್ ಅಭಿಮಾನಿಗಳನ್ನು ನಶೆಯಲ್ಲಿ ತೆಲಿಸುವಂತಿದೆ. ಆದರೆ, ಇತ್ತೀಚಿನ ವರದಿಯ ಪ್ರಕಾರ, ಪುರುಷರ ಸಂಘದಿಂದ ನಟಿ ಸಮಂತಾ ರುತ್ ಪ್ರಭು ಅವರ ಈ ಐಟಂ ಹಾಡಿನ ವಿರುದ್ಧ ಪ್ರಕರಣ ದಾಖಲಾಗಿದೆ.