ಬೆಂಗಳೂರು: 'ಪುಷ್ಪ' ಚಿತ್ರ 2 ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗ ''ಪುಷ್ಪ: ದಿ ರೈಸ್'' ಡಿ. 17ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಸಿನಿಮಾ ಬಿಡುಗಡೆಯ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದೆ. ಬುಧವಾರದಂದು ಇಡೀ ಚಿತ್ರತಂಡ ಬೆಂಗಳೂರಿನಲ್ಲಿ ಸಹ ಪತ್ರಿಕಾಗೋಷ್ಠಿ ಮಾಡಿದ್ದರು. ಈ ಸಂರ್ದಭದಲ್ಲಿ ಚಿತ್ರತಂಡಕ್ಕೆ ಹಲವು ಆಯಾಮಗಳಲ್ಲಿ ಕನ್ನಡದ ಪತ್ರಕರ್ತರು ಚಳಿ ಬಿಡಿಸಿದರು. ಕನ್ನಡ ಪತ್ರಕರ್ತರ ಪ್ರಶ್ನೆಗಳಿಗೆ 'ಪುಷ್ಪ' ಚಿತ್ರತಂಡವು ಸಹ ತಬ್ಬಿಬ್ಬು ಆಗಿದ್ದಾರೆ. ಸದ್ಯ, ಹೊಸದೊಂದು ಕಾರಣಕ್ಕೆ ಕನ್ನಡಿಗರು ಈ ಪ್ಯಾನ್ ಇಂಡಿಯನ್ ಸಿನಿಮಾ ವಿರುದ್ಧ ಗರಂ ಆಗಿದ್ದು, 'ಪುಷ್ಪ' ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ.