More

    ಬ್ರಾ, ಸೊಂಟದ ಸೈಜ್ ಕೇಳಿದ್ದಾರೆ: ನಟಿ ಸುರ್ವೀನ್ ಗರಂ!

    ಮುಂಬೈ: 2008ರಲ್ಲಿ ಸಿನಿಮಾವೊಂದರ ಸೆಟ್‌ನನಲ್ಲಿ ನಟ ನಾನಾ ಪಾಟೇಕರ್ ಕಿರುಕುಳ ನೀಡಿದ್ದಾರೆ ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಆರೋಪಿಸಿದ ನಂತರ ಭಾರತದಲ್ಲಿ #MeToo ಆಂದೋಲನವು ಚುರುಕುಗೊಂಡಿತು. ನಟಿಯ ಸಂದರ್ಶನವು ಅನೇಕ ಇತರ ನಟಿಯರಿಗೆ ಮಾತನಾಡಲು ಧೈರ್ಯವನ್ನು ನೀಡಿತು ಮತ್ತು ಅಂದಿನಿಂದ, ಜೀವನದ ಎಲ್ಲಾ ಹಂತಗಳಲ್ಲೂ ಮಹಿಳೆಯರು ಅವರೊಂದಿಗೆ ನಡೆದ ಪ್ರಸಂಗಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಇದರಿಂದ, ಸಿನಿಮಾರಂಗದಲ್ಲಿ ದೊಡ್ಡ ದೊಡ್ಡ ನಿರ್ಮಾಪಕರ, ನಿರ್ದೇಶಕರು ಸೇರಿದಂತೆ ಹಲವರ ಮೇಲೆ ಆರೋಪ ಬಂದು ದೂರುಗಳು ಸಹ ದಾಖಲಾಗಿದ್ದವು. ಆದರೆ, ಇತ್ತೀಚೆಗೆ #MeToo ಅಭಿಯಾನದ ಜೋರು ಚುರು ಕಡಿಮೆಯಾಗಿದೆ. ಹೀಗಿದ್ದರೂ, ತಮಗಾದ ಅನುಭವಗಳನ್ನು ಕೆಲವು ಸಿನಿಮಾ ನಟಿಯರು ಹಂಚಿಕೊಳ್ಳುತ್ತಿದ್ದಾರೆ. ಸದ್ಯ, ನಟಿ ಸುರ್ವೀನ್ ಚಾವ್ಲಾ ಅವರು ಕೂಡ ತಮಗೆ ಸಿನಿಮಾರಂಗದಲ್ಲಿ ಆದ ಕರಾಳ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
    ಅಂದಹಾಗೆ, ನಟಿ ಸುರ್ವೀನ್ ಚಾವ್ಲಾ ಕನ್ನಡ ಸಿನಿಮಾದಿಂದಲೇ, ನಟನಾ ವೃತ್ತಿಯನ್ನು ಆರಂಭಿಸಿದರು. ನಟ ಶಿವರಾಜ್ ಕುಮಾರ್ ಅವರ ನಟನೆಯ ಪರಮೇಶಿ ಪಾನ್​ವಾಲಸುರ್ವೀನ್​ರ ಮೊದಲ ಸಿನಿಮಾ ಆಗಿದೆ. ಅದಕ್ಕೂ ಮುನ್ನ ನಟಿ ಹಿಂದಿ ಸೀರಿಯಲ್​ಗಳಲ್ಲಿ ನಟಿಸುತ್ತಿದ್ದರು. ಎರಡು ವರ್ಷಗಳ ಹಿಂದೆ, ಸಂದರ್ಶನವೊಂದರಲ್ಲಿ, ದಕ್ಷಿಣ ಭಾರತದ ನಿರ್ದೇಶಕರೊಬ್ಬರು “ತಮ್ಮ ದೇಹದ ಪ್ರತಿ ಇಂಚನ್ನೂ” ತಿಳಿದುಕೊಳ್ಳಲು ಬಯಸಿದ್ದರೆಂದು ಹೇಳಿದ್ದರು. ದಕ್ಷಿಣದ ಮತ್ತೊಬ್ಬ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಸಹ ತಮ್ಮ ಚಿತ್ರ ಪೂರ್ಣಗೊಳ್ಳುವಷ್ಟರಲ್ಲಿ “ನನ್ನ ದೇಹದ ಪ್ರತಿ ಇಂಚಿನ ಬಗ್ಗೆ ತಿಳಿದುಕೊಳ್ಳಲು” ಬಯಸಿದ್ದರು ಎಂದು ಬಿಚ್ಚಿಟ್ಟಿದ್ದಾರೆ. ಚಾವ್ಲಾಗೆ ಈ ರೀತಿಯ ಅನುಭವ ಇದೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್​ನಲ್ಲೂ ಈ ಮುಜುಗರ ಅನುಭವಿಸಿದ್ದಾರೆ. ಆಗೆಲ್ಲಾ ನಟಿ ಅಸಹ್ಯಗೊಂಡು ಬಹಳಷ್ಟು ನಿರ್ಮಾಪಕರ ಕಚೇರಿಯಿಂದ ಎದ್ದು ಹೊರನಡೆಯಬೇಕಾಯಿತಂತೆ.

    ಬ್ರಾ, ಸೊಂಟದ ಸೈಜ್ ಕೇಳಿದ್ದಾರೆ: ನಟಿ ಸುರ್ವೀನ್ ಗರಂ!

    ಇನ್ನು, ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಚಾಟ್‌ನಲ್ಲಿ, ಚಾವ್ಲಾ ದೂರದರ್ಶನದಿಂದ ಚಲನಚಿತ್ರಗಳಿಗೆ ಕಾಲಿಡಲು ಪ್ರಯತ್ನಿಸುತ್ತಿರುವಾಗ, ಮುಂಬೈನಲ್ಲಿ ಅವರ ಮೊದಲ ಚಲನಚಿತ್ರ ಸಭೆಯಲ್ಲಿ,ಅವರ ನೋಟ, ತೂಕ ಮತ್ತು ಸೊಂಟದ ಗಾತ್ರ, ಎದೆಯ ಗಾತ್ರದಬಗ್ಗೆ ಪ್ರಶ್ನೆಗಳನ್ನು ಎದುರಿಸಿದರು ಎಂದು ಸಹ ಬಹಿರಂಗವಾಗಿ ಹೇಳಿದ್ದಾರೆ. ಜೊತೆಗೆ, ಪಾತ್ರಕ್ಕೆ ಪಲ್ಲಂಗ ಅಂದರೆ ಕಾಸ್ಟಿಂಗ್ ಕೌಚ್ ಸಂಸ್ಕೃತಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಎಂದು ಆರೋಪಿಸಿದ್ದಾರೆ. ಕೇವಲ ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಅಲ್ಲದೇ, ಸುರ್ವೀನ್ ಅವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಮಿಂಚಿದ್ದಾರೆ. ಕೆಲಸದ ವಿಚಾರಕ್ಕೆ ಬಂದರೆ, ಸದ್ಯ ಮುಂಬರುವ ನೆಟ್‌ಫ್ಲಿಕ್ಸ್ ಸರಣಿ ಡಿಕೌಪ್ಲ್ಡ್‌ನಲ್ಲಿ ನಟ ಮಾಧವನ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳಲಿದ್ದಾರೆ ಸುರ್ವೀನ್ ಚಾವ್ಲಾ,

    ಮೂರು ಭಾಗಗಳಲ್ಲಿ ಬರಲಿದೆ ಬ್ರಹ್ಮಾಸ್ತ್ರ; 2022ರ ಸೆ.9ಕ್ಕೆ ಮೊದಲ ಭಾಗ ಬಿಡುಗಡೆ

    https://www.vijayavani.net/harnaaz-sandhu-miss-universe-crown-2021-crown-is-worth-37-crores-and-has-white-diamonds-along-with-golden-canary-diamonds/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts