ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್​ ಚಿತ್ರಕ್ಕೆ ಬ್ಯಾನ್​ ಬಿಸಿ; ಲಕ್ಷ್ಮೀ ದೇವಿಗೆ ಅವಹೇಳನ ಆರೋಪ

lakxmi
Published on

ಮುಂಬೈ: ಈಗಾಗಲೇ ಟ್ರೇಲರ್​ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಲಕ್ಷ್ಮೀ ಬಾಂಬ್​ ಚಿತ್ರ ನ. 9ರಂದು ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪ್ರಸಾರವಾಗಲಿದೆ. ಅಷ್ಟೇ ಅಲ್ಲ ಟ್ರೇಲರ್ ವೀಕ್ಷಣೆಯಲ್ಲಿಯೂ ಹೊಸ ದಾಖಲೆಯನ್ನೇ ಬರೆದಿತ್ತು ಈ ಸಿನಿಮಾ. ಇದರ ಜತೆಗೆ ಕೆಲವೊಂದಿಷ್ಟು ನೆಗೆಟಿವ್​ ಕಮೆಂಟ್​ಗಳೂ ಈ ಸಿನಿಮಾಕ್ಕೆ ಸಂದಿವೆ.

ಹೌದು, ಚಿತ್ರದ ಶೀರ್ಷಿಕೆಗೂ ಮತ್ತು ಸಿನಿಮಾದಲ್ಲಿನ ಅಂಶಕ್ಕೂ ತುಂಬ ವ್ಯತ್ಯಾಸವಿದೆ ಎಂದು ಆರೋಪಿಸಿರುವ ನೆಟ್ಟಿಗರು, ಲಕ್ಷ್ಮೀ ಹೆಸರಿಗೆ ಕಳಂಕ ತರುವ ಕೆಲಸವನ್ನು ಈ ಸಿನಿಮಾ ಮಾಡುತ್ತಿದೆ. ಹಾಗಾಗಿ ಈ ಚಿತ್ರವನ್ನು ನೋಡದಿರುವುದೇ ವಾಸಿ ಎಂದು ಬೈಕಾಟ್​ ಲಕ್ಷ್ಮೀ ಬಾಂಬ್​ ಎನ್ನುತ್ತಿದ್ದಾರೆ.

ದೇವತೆ ಲಕ್ಷ್ಮೀ ದೇವಿಗೆ ಈ ಸಿನಿಮಾ ಮೂಲಕ ಅವಹೇಳನ ಮಾಡುತ್ತಿದ್ದೀರಿ ಎಂದು ನಿಷೇಧಕ್ಕೆ ಆಗ್ರಹಿಸಿದರೆ, ತ್ರಿಲಿಂಗಿಯರನ್ನು ಈ ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಿದ್ದೀರಿ. ಅವರನ್ನ ಅವಮಾನಿಸಿದ್ದೀರಿ ಎಂದು ಆ ಸಮುದಾಯವೂ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿದೆ.

ರಾಘವ್​ ಲಾರೆನ್ಸ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ನಾಯಕನಾಗಿ ನಟಿಸಿದರೆ, ಕಿಯಾರಾ ಅಡ್ವಾನಿ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net