ಟಾಕ್ಸಿಕ್​ ಚಿತ್ರದ ಸೋಲಿನ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಯಾರಾ: ಯಶ್​ ಜತೆಗಿನ ಇಂಟಿಮೇಟ್ ದೃಶ್ಯದ ಬಗ್ಗೆಯೂ ಓಪನ್​ ಟಾಕ್​! Kiara Advani

Kiara Advani
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ
Published on: 

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಸೋಲುಂಡಿರುವುದು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಚಿತ್ರದ ಪ್ರಮುಖ ನಾಯಕಿಯರಲ್ಲಿ ಒಬ್ಬರಾದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ( Kiara Advani ), ಸಿನಿಮಾದ ಸೋಲು ಹಾಗೂ ಯಶ್ ಜತೆಗಿನ ತಮ್ಮ ಬೋಲ್ಡ್ ಮತ್ತು ಇಂಟಿಮೇಟ್ (Intimate) ದೃಶ್ಯಗಳ ವಿಚಾರವಾಗಿ ಎದುರಿಸಿದ ಸೈಬರ್ ದಾಳಿಗಳ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ತಮ್ಮ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' (Koffee with Karan) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಕಿಯಾರಾ ಅವರು ಟಾಕ್ಸಿಕ್​ ಸಿನಿಮಾ ಹಾಗೂ ತಮ್ಮ ವೈಯಕ್ತಿಯ ಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

Also Read
ಸಾಯಿ ಪಲ್ಲವಿಯ ವಾರಿಯರ್ ಸೀತಾ ಲುಕ್‌ಗೆ ವಿರೋಧ: ಟ್ರೋಲಿಗರಿಗೆ ಲಾರಾ ದತ್ತಾ ಖಡಕ್ ಕ್ಲಾಸ್! Ramayana movie
Kiara Advani

ಭಾರಿ ನಿರೀಕ್ಷೆಗಳೊಂದಿಗೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದ 'ಟಾಕ್ಸಿಕ್' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿರುವುದು ಮತ್ತು ತಮ್ಮ ಪಾತ್ರಕ್ಕೆ ವ್ಯಕ್ತವಾದ ಕೆಲವು ಪ್ರತಿಕ್ರಿಯೆಗಳು ತಮಗೆ ತೀವ್ರ ಬೇಸರ ತಂದಿತ್ತು ಎಂದು ಕಿಯಾರಾ ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕರೂ, ವಿಶೇಷವಾಗಿ ಮೊದಲ ವಾರಾಂತ್ಯದ ನಂತರ ಸಿನಿಮಾ ಸೋತಿದ್ದು ನನ್ನ ಹೃದಯವನ್ನು ಒಡೆದುಹಾಕಿತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಂಪೂರ್ಣವಾಗಿ ಬಳಲಿದ್ದೆ ಎಂದು ಕಿಯಾರಾ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಸೋತರೂ ತಮ್ಮ ಎಂದಿನ ನಟನಾ ಶೈಲಿಯಿಂದ ಹೊರಬಂದು ಹೊಸ ಬಗೆಯ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಟಾಕ್ಸಿಕ್' ಚಿತ್ರ ಮತ್ತು ಅದರಲ್ಲಿನ 'ನಾದಿಯಾ' ಪಾತ್ರವು ತಮ್ಮ ವೃತ್ತಿಜೀವನದ ಒಂದು ಮಹತ್ವದ ಮೈಲಿಗಲ್ಲಾಗಿ ಉಳಿಯಲಿದೆ ಎಂದು ಕಿಯಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಚಿತ್ರದಲ್ಲಿ ನಟ ಯಶ್ ಅವರೊಂದಿಗಿನ ಇಂಟಿಮೇಟ್ ದೃಶ್ಯಗಳ ಕುರಿತು ಎದುರಾದ ಟೀಕೆಗಳು ಮತ್ತು ಇದಕ್ಕೆ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನೂ ಕಿಯಾರಾ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಸಿದ್ಧಾರ್ಥ್ ಅವರಿಗೆ ಯಾವುದೇ ರೀತಿಯ ಅಸಮಾಧಾನವಾಗಲಿ ಅಥವಾ ಆತಂಕವಾಗಲಿ ಇರಲಿಲ್ಲ ಎಂದು ನಟಿ ತಿಳಿಸಿದ್ದಾರೆ. "ಅವರ ಇದೇ ಸಕಾರಾತ್ಮಕ ಮನೋಭಾವ ನನಗೆ ದೊಡ್ಡ ಶಕ್ತಿ ನೀಡಿತು. ಅದೊಂದು ಅವರಿಗೆ ಸಮಸ್ಯೆಯೇ ಆಗಿರಲಿಲ್ಲ. ಅವರು ಆ ಬಗ್ಗೆ ಎಂದಿಗೂ ಮಾತನಾಡಲಿಲ್ಲ ಮತ್ತು ನಮ್ಮ ನಡುವೆ ಆ ವಿಷಯವಾಗಿ ಯಾವುದೇ ಚರ್ಚೆಯೂ ನಡೆಯಲಿಲ್ಲ. ಯಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ, ಅವರು ಬೇಸರಗೊಳ್ಳಲೂ ಇಲ್ಲ ಎಂದು ಸಿದ್ಧಾರ್ಥ್ ಅವರ ಬೆಂಬಲವನ್ನು ಕಿಯಾರಾ ಕೊಂಡಾಡಿದ್ದಾರೆ.

Also Read
ಅನಿರುದ್ಧ್-ಕಾವ್ಯಾ ಮದುವೆ ಸಂಭ್ರಮದಲ್ಲಿ ರಜನಿಕಾಂತ್ ಭರ್ಜರಿ ಡ್ಯಾನ್ಸ್! ವಿಡಿಯೋ ವೈರಲ್...Rajani dance
Kiara Advani

ಚಿತ್ರರಂಗದಲ್ಲಿ ನಟಿಯರ ಪಾತ್ರಗಳ ಕುರಿತು ಇಂತಹ ಟೀಕೆಗಳು ಕೇಳಿಬರುವುದು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಗತಿಯಾಗಿದ್ದು, ಅನೇಕ ಶ್ರೇಷ್ಠ ಕಲಾವಿದರು ಕೂಡ ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ ಎಂದು ಕಿಯಾರಾ ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾದಲ್ಲಿನ ಪಾತ್ರವನ್ನು ಕೇವಲ ಕಲೆಯ ದೃಷ್ಟಿಯಿಂದ ನೋಡಬೇಕೇ ಹೊರತು, ವೈಯಕ್ತಿಕ ದಾಳಿಗಳಿಗೆ ಬಳಸಿಕೊಳ್ಳಬಾರದು ಎಂಬುದು ಕಿಯಾರಾ ಅವರ ಮಾತಿನ ಸಾರಾಂಶವಾಗಿತ್ತು.

ವಿಶೇಷವೆಂದರೆ, ತಮ್ಮ ವಿರುದ್ಧ ನಡೆದ ಸೈಬರ್ ದಾಳಿಗಳ ಬಗ್ಗೆ ತಾವು ಪ್ರತ್ಯೇಕವಾಗಿ ಯಾವುದೇ ಸ್ಪಷ್ಟನೆ ನೀಡುವ ಅಗತ್ಯವೇ ಬರಲಿಲ್ಲ ಎಂದು ಕಿಯಾರಾ ಹೇಳಿದ್ದಾರೆ. ಏಕೆಂದರೆ, ಸಾಮಾಜಿಕ ಜಾಲತಾಣಗಳಲ್ಲಿನ ಈ ದ್ವಂದ್ವ ನೀತಿ (Double Standards) ಮತ್ತು ಟ್ರೋಲಿಂಗ್ ವಿರುದ್ಧ ಸ್ವತಃ ನೆಟ್ಟಿಗರು ಹಾಗೂ ಅಭಿಮಾನಿಗಳೇ ದೊಡ್ಡ ಸಂಖ್ಯೆಯಲ್ಲಿ ಧ್ವನಿ ಎತ್ತಿ ತಮಗೆ ಬೆಂಬಲವಾಗಿ ನಿಂತರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, 'ಟಾಕ್ಸಿಕ್' ಚಿತ್ರದ ಸೋಲಿನ ಕಹಿಯ ನಡುವೆಯೂ, ಪತಿಯ ಬೆಂಬಲ ಮತ್ತು ನಾದಿಯಾ ಪಾತ್ರದ ಅನುಭವವು ತಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂಬುದನ್ನು ಕಿಯಾರಾ ಅಡ್ವಾಣಿ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).