ಅನೈತಿಕ ಸಂಬಂಧ, ಮನಸ್ತಾಪ, ಡಿವೋರ್ಸ್, ಒಪ್ಪಂದ?​ ಗೋವಿಂದ ವಿರುದ್ಧ ವಿಚ್ಛೇದನ ಅರ್ಜಿ ಹಿಂಪಡೆದ ಸುನಿತಾ ಅಹುಜಾ! Sunita Ahuja Divorce Govinda

ಗೋವಿಂದ ವಿರುದ್ಧದ ವಿಚ್ಛೇದನ ಅರ್ಜಿ ಹಿಂಪಡೆದ ಸುನಿತಾ ಅಹುಜಾ
ಗೋವಿಂದ ವಿರುದ್ಧದ ವಿಚ್ಛೇದನ ಅರ್ಜಿ ಹಿಂಪಡೆದ ಸುನಿತಾ ಅಹುಜಾ
Published on

ಪ್ರಮುಖ ಮುಖ್ಯಾಂಶಗಳು

  • ಗೋವಿಂದ ವಿರುದ್ಧದ ವಿಚ್ಛೇದನ ಅರ್ಜಿ ಹಿಂಪಡೆದ ಸುನಿತಾ ಅಹುಜಾ
  • 2024 ರಲ್ಲಿ ಸಲ್ಲಿಸಿದ್ದ ಡಿವೋರ್ಸ್​ ಅರ್ಜಿ
  • ಇಂದು ಮಗ ಯಶ್​ವರ್ಧನ ಜೊತೆ ಮುಂಬೈನ ಕೌಟುಂಬಿಕ ನ್ಯಾಯಾಲಯಕ್ಕೆ ಬಂದ ಸುನಿತಾ
  • ವಿಚ್ಛೇದನದ ಕುರಿತು ಗೋವಿಂದ ನೋ ರಿಯಾಕ್ಷನ್​
ಮುಂಬೈ: ಇಂದು (ಬುಧವಾರ, ಆ.19) ಮುಂಬೈನ ಕೌಟುಂಬಿಕ ನ್ಯಾಯಾಲಯದಿಂದ ಬಾಲಿವುಡ್​ ನಟ ಗೋವಿಂದ ಪತ್ನಿ ಸುನಿತಾ ಅಹುಜಾ (Sunita Ahuja Divorce Govinda) ಆಚೆ ಬರುತ್ತಿರುವ ದೃಶ್ಯಗಳು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿವೆ.
ಕಳೆದ ಕೆಲ ದಿನಗಳ ಹಿಂದೆ ತನ್ನ ಪತಿಯ ಅನೈತಿಕ ಸಂಬಂಧಗಳ ಬಗ್ಗೆ ಹೇಳಿಕೆ ನೀಡಿದ್ದ ಹಿನ್ನಲೆ ಇಂದು ಸುನಿತಾ ವಿಚ್ಛೇದನಕ್ಕೆ ಮುಂದಾಗಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ನಟಿ ಈ ಮೊದಲೇ ಗೋವಿಂದ ವಿರುದ್ಧ ಡಿವೋರ್ಸ್​ ಅರ್ಜಿ ಸಲ್ಲಿಸಿದ್ದು, ಇಂದು ಅದನ್ನು ಮರಳಿ ಪಡೆದಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಸುನಿತಾ ಮ್ಯಾನೇಜರ್​​ ಹೇಳಿದ್ದೇನು?

ಬುಧವಾರ ಬೆಳಿಗ್ಗೆ ಸುನಿತಾ ಅಹುಜಾ, ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಮಗ ಯಶ್​ವರ್ಧನ್​​ ಜೊತೆ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಕೆಲವರು ಸುನಿತಾ ಗೋವಿಂದಾಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆಂದು ವದಂತಿ ಹಬ್ಬಿಸಿದ್ದಾರೆ.

ನಂತರ, ಈ ಕುರಿತು ಸುನಿತಾ ಅವರ ಮ್ಯಾನೇಜರ್​ನನ್ನು ಸಂಪರ್ಕಿಸಿದಾಗ, ಸುನಿತಾ 2024 ರಲ್ಲಿಯೇ ಗೋವಿಂದ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗಿ, ಇಂದು ಅದನ್ನು ವಾಪಸ್​ ಪಡೆಯಲು ಮುಂದಾಗಿರುವ ಸಂಗತಿ ಬಹಿರಂಗಗೊಂಡಿದೆ.


ಏನಿದು ವಿವಾದ?

ಕಳೆದ ಕೆಲ ವರ್ಷಗಳಿಂದ ಬಾಲಿವುಡ್​ ನಟ ಗೋವಿಂದ ಹಾಗೂ ಪತ್ನಿ ಸುನಿತಾ ಅಹುಜಾ ನಡುವೆ ವೈಮನಸ್ಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಸುನಿತಾ ಕೆಲ ಸಂದರ್ಶಗಳಲ್ಲಿ ಗೋವಿಂದ ಮಗಳ ವಯಸ್ಸಿನ ನಟಿಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಆರೋಪಿಸಿದ್ದಾರೆ.
ಹೀಗಾಗಿ, ಗೋವಿಂದ ಅವರ ಅನೈತಿಕ ಸಂಬಂಧಗಳನ್ನು ತಾಳಲಾರದೆ ಸುನಿತಾ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾಗಿ, ಈಗ ಮನೆಯ ವಿಷಯವನ್ನು ಮನೆಯಲ್ಲಿಯೇ ಸರಿ ಮಾಡಿಕೊಳ್ಳೋಣ ಎಂದು ನಿರ್ಧರಿಸಿ, ಅರ್ಜಿಯನ್ನು ವಾಪಸ್​ ಪಡೆದಿದ್ದಾಗಿ ಹೇಳಲಾಗುತ್ತಿದೆ.

ಗೋವಿಂದ ನೋ ರಿಯಾಕ್ಷನ್​!


ಆದರೆ, ತನ್ನ ಸಂಸಾರದಲ್ಲಿ ಇಷ್ಟೇಲ್ಲಾ ವಾದ-ವಿವಾದ ನಡೆಯುತ್ತಿದ್ದರೂ ಗೋವಿಂದ ಮಾತ್ರ ಮೌನ ವಹಿಸಿದ್ದಾರೆ. ಕೆಲ ದಿನಗಳ ಹಿಂದೆ ಗೋವಿಂದ ಯುವ ನಟಿ ಜೊತೆಗೆ ಕಾಣಿಸಿಕೊಂಡಾಗ ಸುನಿತಾ ಮಾಡಿದ್ದ ಕಮೆಂಟ್​ಗೆ ಪ್ರತಿಕ್ರಿಯೆ ನೀಡಿದ್ದ ಗೋವಿಂದ, ವಿಷಯಗಳ ಬಗ್ಗೆ ಸರಿಯಾಗಿ ಮಾಹಿತಿ ಇರದೇ ಮಾತನಾಡಬಾರದೆಂದು ಹೇಳಿದ್ದರು.

ಆದರೆ, ಇಲ್ಲಿವರೆಗೆ ತಮ್ಮ ಪತ್ನಿ ಬಗ್ಗೆಯಾಗಲೀ, ಅನೈತಿಕ ಸಂಬಂಧಗಳ ಬಗ್ಗೆಯಾಗಲೀ ಅಥವಾ ವಿಚ್ಛೇದನ ಬಗ್ಗೆಯಾಗಲೀ ಗೋವಿಂದ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, (ಏಜನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net