ಬಿಸಿಲಿನ ಝಳಕ್ಕೆ ಉತ್ತರ ಕೊರಿಯಾ ತತ್ತರ: ದಿನಕ್ಕೆ ಒಂದು ಲೀಟರ್ ಬಿಯರ್ ಕುಡಿಯಲು ಸೂಚನೆ; ವೈದ್ಯಕೀಯ ವರದಿ ಹೇಳುವುದೇನು? Beer Drinking in North Korea
ಬಾಯಾರಿಕೆ ನೀಗಿಸಲು ದಿನಕ್ಕೆ 1 ಲೀಟರ್ ಬಿಯರ್ ಕುಡಿಯುವಂತೆ ಸರ್ಕಾರ ಆದೇಶ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉತ್ತರ ಕೊರಿಯಾದಲ್ಲಿ ವಿಪರೀತ ಬಿಸಿಲಿನ ಝಳ!
ಬಾಯಾರಿಕೆ ನೀಗಿಸಲು ದಿನಕ್ಕೆ 1 ಲೀಟರ್ ಬಿಯರ್ ಕುಡಿಯುವಂತೆ ಸರ್ಕಾರ ಆದೇಶ
ಆದರೆ, ಬಿಯರ್ ಸೇವನೆ ಬಗ್ಗೆ ವೈದ್ಯಕೀಯ ವರದಿ ಹೇಳುವುದೇನು?
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಉಷ್ಣಾಂಶ ಮಿತಿ ಮೀರುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ, ಪ್ರಜೆಗಳಿಗೆ ಬಿಸಿಲಿನ ತಾಪದಿಂದ ನೆಮ್ಮದಿ ಪಡೆಯಲು ಬಿಯರ್ (Beer Drinking in North Korea) ಸೇವಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಸರ್ಕಾರಿ ಸುದ್ದಿ ವಾಹಿನಿಯಾದ ನಾರ್ಥ್ ಕೊರಿಯಾ ನ್ಯೂಸ್ನಲ್ಲಿ, ದಿನಕ್ಕೆ ಒಂದು ಲೀಟರ್ ಬಿಯರ್ ಕುಡಿದರೆ, ಬಿಸಿಲಿನ ತಾಪದಿಂದ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗಿದೆ.
ದೇಶದಲ್ಲಿ ಸೂರ್ಯನ ಶಾಖ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಅಧಿಕ ಬಿಸಿಲಿನಿಂದ ಜನ ತತ್ತರಿಸುತ್ತಿದ್ದಾರೆ. ಹೀಗಾಗು ಉತ್ತರ ಕೊರಿಯಾ ಸರ್ಕಾರ ಅಲ್ಲಿಯ ಜನರಿಗೆ ದಿನಕ್ಕೆ ಒಂದು ಲೀಟರ್ ಬಿಯರ್ ಮತ್ತು ಕಾಲ-ಕಾಲಕ್ಕೆ ನೀರನ್ನು ಮತ್ತು ಚಹವನ್ನು ಸೇವಿಸುತ್ತಿರಿ ಎಂದು ಸೂಚನೆ ನೀಡಿದೆ.
ಇದರ ಜೊತೆಗೆ ಮಂಜುಗಡ್ಡೆ ಪೌಂಡರ್ ಅನ್ನು, ಹಣ್ಣಿನ ರಸವನ್ನು ಮತ್ತು ಹಸುವಿನ ಹಾಲನ್ನು ಹೆಚ್ಚಿನದಾಗಿ ಸೇವಿಸಿದರೆ ಅಧಿಕ ತಾಪದಿಂದ ನೆಮ್ಮದಿ ಸಿಗಲಿದೆ ಎಂದು ಉತ್ತರ ಕೊರಿಯಾದ ಸುದ್ದಿ ವಾಹಿನಿ ಅಲ್ಲಿನ ಜನರಿಗೆ ತಿಳಿಸಿದೆ.
ಬಿಯರ್ ಕುಡಿದರೆ ದೇಹ ತಂಪಾಗುತ್ತಾ?
ಈ ಸುದ್ದಿ ಈಗ ಪ್ರಪಂಚದಾದ್ಯಂತ ಎಲ್ಲಡೆಗೆ ವೈರಲ್ ಆಗಿದ್ದು, ಜನರು ನಿಜಕ್ಕೂ ಬಿಯರ್ ಕುಡಿದರೆ ದೇಹ ತಂಪಾಗುತ್ತಾ? ಎಂಬ ಪ್ರಶ್ನೆ ಮತ್ತೆ ಬೆರಗನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ ಬಿಯರ್ ಕುಡಿದರೆ ದೇಹ ತಂಪಾಗುವ ಬದಲು ಇನ್ನಷ್ಟು ಹಿಟ್ ಆಗುತ್ತದೆ.
ಬಿಯರ್ ಅನ್ನು ಮುಖ್ಯವಾಗಿ ಸಿರಿ ಧಾನ್ಯಗಳಿಂದ ಮಾಡಿರುತ್ತಾರೆ. ಅವುಗಳಲ್ಲಿ ಅಧಿಕ ಉಷ್ಣಾಂಶವಿರುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಅಲ್ಕೋಹಾಲ್ ಅಂಶವಿರುವ ಕಾರಣ ಅದನ್ನು ಜೀರ್ಣ ಮಾಡಲು ಲಿವರ್ ಅತ್ಯಧಿಕ ಶ್ರಮ ವಹಿಸಬೇಕಾಗುತ್ತದೆ. ಹೀಗಾಗಿ ಬಿಯರ್ ಸೇವನೆಯಿಂದ ದೇಹಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತಿಳಿದು ಬಂದಿದೆ.
ಬಿಯರ್ ಅನ್ನು ಹೆಚ್ಚಾಗಿ ಫ್ರೀಜ್ನಲ್ಲಿಟ್ಟು, ಐಸ್ಚಿಲ್ಡ್ ಮಾಡಿ ಕುಡಿಯುವುದರಿಂದ ಬಿಯರ್ ದೇಹಕ್ಕೆ ತಂಪಿನಾಂಶವನ್ನು ನೀಡಲಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ನಿಜಾರ್ಥದಲ್ಲಿ ಬಿಯರ್ ಕುಡಿದರೆ ದೇಹ ಇನ್ನಷ್ಟು ಬೆಚ್ಚಗಾಗುತ್ತದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಬಿಯರ್ ಸೇವನೆ ಸೂಕ್ತವಲ್ಲ ಎಂದು ವೈದ್ಯರು ತಿಳಿಸಿದ್ದಾರೆ, (ಏಜನ್ಸೀಸ್).