

ಮುಂಬೈ: 'ಶೇರ್ಷಾ' ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕಳೆದ ವಾರವಷ್ಟೇ ಜೈಪುರ್ನ ಅರಮನೆಯಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಕರಣ್ ಜೋಹರ್ ಸೇರಿದಂತೆ ಬೆರಳಣಿಕೆಯಷ್ಟು ಮಾತ್ರ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕಾರಣ ಸಿದ್ಧಾರ್ಥ್ ಮತ್ತು ಕಿಯಾರಾ ದೊಡ್ಡ ಸಂಖ್ಯೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳನ್ನು ಕರೆದಿರಲಿಲ್ಲ.
ಈಗ ಕಿಯಾರಾ ಮತ್ತು ಸಿದ್ಧಾರ್ಥ್ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಈ ಆರತಕ್ಷತೆಯಲ್ಲಿ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಭಾಗವಹಿಸಿರುವುದು ವಿಶೇಷ. ಭಾನುವಾರ ಇಲ್ಲಿನ ದೊಡ್ಡ ಹೋಟೆಲ್ವೊಂದರಲ್ಲಿ ನಡೆದ ಆರತಕ್ಷತೆಯಲ್ಲಿ ಜನಪ್ರಿಯ ನಟ-ನಟಿಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.
ಆಲಿಯಾ ಭಟ್, ನೀತು ಕಪೂರ್, ಕರೀನಾ ಕಪೂರ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ನತಾಶಾ ದಲಾಲ್, ಗೌರಿ ಖಾನ್, ಕೃತಿ ಸನಾನ್, ವರುಣ್ ಧವನ್, ವಿಕ್ಕಿ ಕೌಶಾಲ್, ರಣವೀರ್ ಸಿಂಗ್, ಭೂಮಿ ಪೆಡ್ನೇಕರ್, ದಿಶಾ ಪಟಾಣಿ, ಅನನ್ಯಾ ಪಾಂಡೆ, ಕಾಜೊಲ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ನೇಹಾ ದೂಪಿಯಾ, ಆಯುಷ್ಮಾನ್ ಖುರಾನ, ರಿತೇಶ್ ದೇಶ್ಮುಕ್, ಜೆನೆಲಿಯಾ ಡಿಸೋಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಗೆ ಶುಭ ಕೋರಿದ್ದಾರೆ.