More

    ಸಿನಿಮಾನೂ ಆಯಿತು, ಮನೆಯನ್ನೂ ಕಟ್ಟಿಸಿದರು; ದೊಡ್ಡಹಟ್ಟಿ ಬೋರೇಗೌಡ ಚಿತ್ರತಂಡದ ಒಂದೊಳ್ಳೆಯ ಕೆಲಸ

    ಬೆಂಗಳೂರು: ಹಾಡಿನ ಚಿತ್ರೀಕರಣಕ್ಕೆ ಒಂದು ಕೋಟಿ ಸೆಟ್ ನಿರ್ವಿುಸಿದ್ದರಂತೆ, ಫೈಟ್ ಶೂಟಿಂಗ್​ಗೆ ಎರಡು ಕೋಟಿ ಸೆಟ್ ನಿರ್ವಿುಸಿದ್ದರಂತೆ … ಇಂತಹ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ‘ತರ್ಲೆ ವಿಲೇಜ್’ ಹಾಗೂ ‘ಪರಸಂಗ’ ಚಿತ್ರಗಳ ನಿರ್ದೇಶಕ ಕೆ.ಎಂ. ರಘು ಒಂದೊಳ್ಳೆಯ ಕೆಲಸ ಮಾಡಿದ್ದಾರೆ.

    ಅವರ ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಎಂಬ ಹೊಸ ಚಿತ್ರಕ್ಕೆ ಚಿತ್ರತಂಡವು ಒಂದು ಮನೆಯನ್ನು ನಿರ್ವಿುಸಿತ್ತು. ಈಗ ಆ ಮನೆಯನ್ನು ಬಡ ರೈತ ಕುಟುಂಬಕ್ಕೆ ನೀಡಿದೆ. ಆ ಮೂಲಕ ಬೇರೆ ಸಿನಿಮಾ ತಂಡಗಳಿಗೂ ಮಾದರಿಯಾಗಿದೆ. ಸಾಮಾನ್ಯವಾಗಿ ಸ್ಟುಡಿಯೋಗಳಲ್ಲಿ ನಿರ್ವಿುಸಲಾಗುವ ಸೆಟ್​ಗಳನ್ನು ಚಿತ್ರೀಕರಣ ಪೂರ್ಣಗೊಂಡ ಬಳಿಕ ಕೆಡವಲಾಗುತ್ತದೆ. ಆದರೆ, ದೊಡ್ಡಹಟ್ಟಿ ಬೋರೇಗೌಡ ಚಿತ್ರತಂಡ ಒಂದು ಕುಟುಂಬಕ್ಕೆ ನೆರಳಾಗುವ ಸೆಟ್ ಹಾಕಿದೆ.

    ಚಿತ್ರದಲ್ಲಿ ಆಶ್ರಯ ಯೋಜನೆ ಮನೆಯನ್ನು ಒಬ್ಬ ಬಡ ರೈತ ಪಂಚಾಯಿತಿಯಿಂದ ಪಡೆದು, ಮನೆ ಕಟ್ಟುವ ಕಥೆ ಇದೆ. ಈ ಚಿತ್ರಕ್ಕಾಗಿ ಒಂದು ಮನೆಯ ಅವಶ್ಯಕವಾಗಿತ್ತು. ಸೆಟ್ ಹಾಕುವ ಬದಲು ಚಿತ್ರತಂಡದವರು ಮೈಸೂರಿನಿಂದ ಸುಮಾರು 35 ಕಿಮೀ ದೂರದ ಗದ್ದಿಗೆ ಎಂಬ ಗ್ರಾಮದಲ್ಲಿ ಕೃಷ್ಣ ಎಂಬುವವರ ಜಾಗದಲ್ಲಿ ನೈಜವಾಗಿಯೇ ಮನೆ ಕಟ್ಟಿಸಿದ್ದಾರೆ. ‘ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ವಿುಸಲಾಗಿದ್ದು, ಕೃಷ್ಣ ಅವರ ಕುಟುಂಬ ಈಗ ಅದೇ ಮನೆಯಲ್ಲಿ ವಾಸವಿದೆ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ನಿರ್ದೇಶಕ ರಘು.

    ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

    ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts