ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

ಕೊಚ್ಚಿ: ಮದುವೆ ದಿನವೇ ವಿವಾಹದ ದಿರಿಸಿನಲ್ಲೇ ವಧು-ವರ ಮತ ಚಲಾಯಿಸಲು ಅಥವಾ ಪರೀಕ್ಷೆಗೆ ಹಾಜರಾಗಲು ಬರುವ ಸಂಗತಿ ಅತ್ಯಪರೂಪಕ್ಕೊಮ್ಮೆ ಸಂಭವಿಸಿರುತ್ತದೆ. ಅಂಥದ್ದೇ ಒಂದು ಅಪರೂಪದ ಸಂಗತಿಗೆ ವಧುವೊಬ್ಬಳು ಸಾಕ್ಷಿಯಾಗಿದ್ದಾಳೆ.

ಇಲ್ಲೊಬ್ಬಳು ವಧು ಮದುವೆ ದಿನವೇ ಅದೇ ಉಡುಪಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಆ ಕುರಿತ ವಿಡಿಯೋವೊಂದು ವೈರಲ್ ಆಗಿದೆ. ಅಂದಹಾಗೆ ಈ ಪ್ರಕರಣ ಕೇರಳದಲ್ಲಿ ನಡೆದಿದೆ. ಇಲ್ಲಿನ ಬೆಥನಿಯ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಶ್ರೀಲಕ್ಷ್ಮೀ ಅನಿಲ್​ ಗಮನ ಸೆಳೆದಿರುವ ವಧು.

ವೈದ್ಯಕೀಯ ವಿದ್ಯಾರ್ಥಿನಿ ಆಗಿರುವ ಈಕೆಯ ಮದುವೆಯ ದಿನದಂದೇ ಫಿಸಿಯೋಥೆರಪಿ ಎಕ್ಸಾಂ ಇದ್ದ ಕಾರಣ ಇವಳು ಮದುವೆಗೆ ಧರಿಸಿದ್ದ ದಿರಿಸಿನ ಮೇಲೆ ವೈಟ್​ ಕೋಟ್ ತೊಟ್ಟು, ಸ್ಟೆತೋಸ್ಕೋಪ್​ ಹಾಕಿಕೊಂಡು ಹಾಜರಾಗಿದ್ದಾಳೆ. ಈ ಅಪರೂಪದ ಸನ್ನಿವೇಶದ ವಿಡಿಯೋವನ್ನು ‘ಫಿಸಿಯೋಥೆರಪಿ ಎಕ್ಸಾಂ ಮತ್ತು ಮದುವೆ ಒಂದೇ ದಿನ’ ಎಂಬ ಕ್ಯಾಪ್ಷನ್ ಜತೆ ಈಕೆ ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು, ಭರ್ಜರಿ ಪ್ರತಿಕ್ರಿಯೆಯನ್ನು ಪಡೆದಿದೆ.

40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

ನಟಿ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಅತ್ಯಾಚಾರ ಆರೋಪ; ಇನ್ನೊಬ್ಬಳು ಮಹಿಳೆಯಿಂದ ದೂರು ದಾಖಲು

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…