ಲಾಕ್​ಡೌನ್​ನಲ್ಲಿ ಆಮೀರ್ ಖಾನ್​ ಹೇಗಾಗಿದ್ದಾರೆ?; ಅಚ್ಚರಿಯ ಫೋಟೋ ಬಹಿರಂಗ!

collage (18)
Published on

ಬಾಲಿವುಡ್​ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್​ ಖಾನ್​, ಲಾಕ್​ಡೌನ್​ ಹಿನ್ನೆಲೆಯಲ್ಲಿ ಭೂಗತ ಆಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಒಂದೇ ಒಂದು ಸೋಷಿಯಲ್​ ಮೀಡಿಯಾ ಪೋಸ್ಟ್ ಸಹ ಅವರಿಂದ ಅಪ್​ಲೋಡ್​ ಆಗಿಲ್ಲ. ಆಮೀರ್ ಹೇಗಿದ್ದಾರೆ? ಕ್ವಾರಂಟೈನ್​ ಲುಕ್​ ಹೇಗಿದೆ ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದೀಗ, ಫಾದರ್ಸ್​ ಡೇ ನಿಮಿತ್ತ ಆಮೀರ್​ ಅವತಾರ ಹೊರಬಿದ್ದಿದೆ. ಮುಖದ ಮೇಲಿನ ನೆರಿಗೆಗಳು, ಬಿಳಿ ಕೂದಲು, ಬಿಳಿ ಹುಬ್ಬಿನಲ್ಲಿ ಆಮೀರ್ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದಾರೆ!

ಹೌದು, ಜೂನ್ 21 ವಿಶ್ವ ಅಪ್ಪನ ದಿನ. ಆ ಪ್ರಯುಕ್ತ ಆಮೀರ್​ ಪುತ್ರಿ ಇರಾ ಖಾನ್​ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಅಪ್ಪನ ಜತೆಗಿರುವ ಫೋಟೋ ಹಂಚಿಕೊಂಡಿದ್ದರು. ಆ ಫೋಟೋ ನೋಡಿದ ಬಹುತೇಕರು ಆಮೀರ್​ ಹೊಸ ಲುಕ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ನಿಮ್ಮ ಸಿನಿಮಾ ಬಗ್ಗೆ ಅಪ್​ಡೇಟ್​ ಮಾಹಿತಿ ನೀಡಿ ಎಂದೂ ಕೋರಿದ್ದಾರೆ.

ಸದ್ಯ ಲಾಲ್​ ಸಿಂಗ್​ ಛಡ್ಡಾ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದ ಆಮೀರ್​, ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಸಂಪೂರ್ಣ ಲಾಕ್​ಡೌನ್​ ತೆರವಾದ ಮೇಲೆ ಮತ್ತು ಶೂಟಿಂಗ್​ಗೆ ಅನುಮತಿ ಸಿಕ್ಕ ಬಳಿಕವಷ್ಟೇ ಸೆಟ್​ನತ್ತ ಧಾವಿಸಲಿದ್ದಾರೆ ಆಮೀರ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net