More

    VIDEO| ಹಾರ್ದಿಕ್ ಪಾಂಡ್ಯ ವರ್ಕೌಟ್‌ಗೆ ಬಾಲಿವುಡ್ ನಟಿಯರು ಬೌಲ್ಡ್!

    ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಫಿಟ್ನೆಸ್‌ನಿಂದ ಈಗಾಗಲೆ ಗಮನ ಸೆಳೆದಿದ್ದಾರೆ. ಭಾನುವಾರ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಪುಶ್‌ಅಪ್‌ಗಳ ವರ್ಕೌಟ್ ವಿಡಿಯೋಗೆ ಬಾಲಿವುಡ್ ನಟಿಯರು ಕೂಡ ಬೌಲ್ಡ್ ಆಗಿದ್ದಾರೆ.

    ಇದನ್ನೂ ಓದಿ: PHOTOS | ಅಪ್ಪನಿಗೆ ಥ್ಯಾಂಕ್ಸ್ ಹೇಳಿದ ಕ್ರೀಡಾತಾರೆಯರು

    ‘ಸ್ಟಾಂಗರ್, ಫಿಟ್ಟರ್. ಸ್ಟಿಲ್ ಅಂಡರ್ ಕನ್‌ಸ್ಟ್ರಕ್ಶನ್ ಕೃನಾಲ್ ಪಾಂಡ್ಯ ಭಾಯಿ ನಾನು ನಿನಗೆ ಸವಾಲೆಸೆಯುತ್ತಿದ್ದೇನೆ. ನೀನೆಷ್ಟು ಪುಶ್‌ಅಪ್‌ಗಳನ್ನು ಮಾಡುವೆ ನೋಡೋಣ’ ಎಂದು ಹಾರ್ದಿಕ್ ವಕೌಟ್ ವಿಡಿಯೋದ ಮೂಲಕ ಅಣ್ಣ ಕೃನಾಲ್ ಪಾಂಡ್ಯಗೆ ಸವಾಲೆಸೆದಿದ್ದಾರೆ. ಈ ಪೋಸ್ಟ್‌ಗೆ ಅವರ ಪತ್ನಿ ನತಾಶಾ ಸ್ಟಾಂಕೋವಿಕ್, ಬೈಸೆಪ್ಸ್ ಇಮೋಜಿ ಹಾಕಿದ್ದರೆ, ಬಾಲಿವುಡ್ ನಟಿಯರಾದ ಸೈಯಾಮಿ ಖೇರ್ ಮತ್ತು ಕರಿಷ್ಮಾ ಟನ್ನಾ ಕೂಡ ಕಮೆಂಟ್‌ಗಳನ್ನು ಹಾಕಿದ್ದಾರೆ.

    ಇದನ್ನೂ ಓದಿ: PHOTOS | ಕ್ರೀಡಾತಾರೆಯರಿಂದ ಯೋಗ ದಿನಾಚರಣೆ

    ‘ಇದು ನಿಜಕ್ಕೂ ತಲೆಕೆಡಿಸುತ್ತಿದೆ’ ಎಂದು ಸೈಯಾಮಿ ಖೇರ್ ಕಮೆಂಟ್ ಹಾಕಿದ್ದರೆ, ‘ನೀವು ಹೇಗೆ ಇದನ್ನು ಮಾಡುತ್ತೀರಿ?’ ಎಂದು ಕರಿಷ್ಮಾ ಟನ್ನಾ ಪ್ರತಿಕ್ರಿಯಿಸಿದ್ದಾರೆ. 26 ವರ್ಷದ ಹಾರ್ದಿಕ್ ಅಪ್ಪನಾಗುತ್ತಿರುವ ಸುದ್ದಿಯನ್ನು ಕಳೆದ ತಿಂಗಳಷ್ಟೇ ಬಹಿರಂಗಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts