‘ಬೆಲ್​ಬಾಟಂ’ ಚಿತ್ರಕ್ಕಾಗಿ 18 ವರ್ಷದ ರೂಲ್​ ಬ್ರೇಕ್​ ಮಾಡಿದ ಅಕ್ಷಯ್​ ಕುಮಾರ್!

Akshay
Published on

ಮುಂಬೈ: ಬಾಲಿವುಡ್​ ಸ್ಟಾರ್ ನಟ ಅಕ್ಷಯ್​ ಕುಮಾರ್ ಕೆಲಸದ ವಿಚಾರದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್​. ಶಿಸ್ತುಬದ್ಧವಾದ ಜೀವನ ಶೈಲಿಯ ಜತೆಗೆ ಸಿನಿಮಾ ವಿಚಾರದಲ್ಲೀ ಅಷ್ಟೇ ಶಿಸ್ತು ಪಾಲಿಸುತ್ತ ಬಂದಿದ್ದಾರೆ. ತಮ್ಮದೇ ಆದ ನೀತಿ ನಿಯಮಗಳನ್ನು ಅಳವಡಿಸಿಕೊಂಡು ಅದನ್ನು ಪಾಲಿಸುತ್ತ ಬಂದಿದ್ದಾರೆ. ಇದೀಗ ಆ ನೀತಿ ನಿಯಮವನ್ನೂ ಸ್ವತಃ ಅವರೇ ಬ್ರೇಕ್​ ಮಾಡಿದ್ದಾರೆ. ಹಾಗಾದರೆ ಏನದು ರೂಲ್? ಅದಕ್ಕೆ ಉತ್ತರ ಇಲ್ಲಿದೆ.

ಕಳೆದ 18 ವರ್ಷಗಳಿಂದ ದಿನಕ್ಕೆ 8 ಗಂಟೆ ಮಾತ್ರ ಅಕ್ಷಯ್​ ಕುಮಾರ್​ ಸಿನಿಮಾ ಶೂಟಿಂಗ್​ನಲ್ಲಿ ಭಾಗವಹಿಸುತ್ತ ಬಂದಿದ್ದಾರೆ. 8 ಗಂಟೆ ಮೇಲೆ ಒಂದು ಕ್ಷಣವೂ ಅವರು ಸೆಟ್​ನಲ್ಲಿ ಇರುವುದಿಲ್ಲ. ಇದೀಗ ಹಾಗೆ ಪಾಲಿಸಿಕೊಂಡು ಬಂದ ನೀತಿಯನ್ನು ಬ್ರೇಕ್​ ಮಾಡಿದ್ದಾರೆ. ಬೆಲ್​ಬಾಟಂ ಸಿನಿಮಾ ಸಲುವಾಗಿ, 8 ಗಂಟೆ ಕೆಲಸ ಮಾಡುವ ಬದಲು ಡಬಲ್​ ಶಿಫ್ಟ್​ನಲ್ಲಿ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ!

ಕರೊನಾ ಹಾವಳಿಯ ನಡುವೆಯೂ ಸ್ಲಾಟ್​ಲೆಂಡ್​ನಲ್ಲಿ ಬೆಲ್​ಬಾಟಂ ಚಿತ್ರದ ಶೂಟಿಂಗ್​ ಮಾಡಿಕೊಳ್ಳಲು ತಂಡದವರು ಪ್ಲಾನ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಶೂಟಿಂಗ್​ಗೂ ಮುನ್ನ ತಂಡದವರೆಲ್ಲ 14 ದಿನಗಳ ಕಾಲ ಸ್ಕಾಟ್​ಲೆಂಡ್​ನಲ್ಲಿಯೇ ಕ್ವಾರಂಟೈನ್​ನಲ್ಲಿದ್ದು, ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 14 ದಿನಗಳ ಕಾಲ ಇಡೀ ತಂಡದ ಉಸ್ತುವಾರಿ ನಿರ್ಮಾಪಕರದ್ದಾಗಿತ್ತು. ಆ ಖರ್ಚು ವೆಚ್ಚ ನಿರ್ಮಾಪಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಡಬಲ್​ ಶಿಫ್ಟ್​ನಲ್ಲಿ ಅಕ್ಷಯ್​ ಕೆಲಸ ಆರಂಭಿಸಿದ್ದಾರೆ.

ಅಕ್ಷಯ್​ ಅವರ ಈ ನಿರ್ಧಾರ ತಂಡದ ಖುಷಿಗೆ ಕಾರಣವಾಗಿದ್ದು, ಇಡೀ ತಂಡ ಅಷ್ಟೇ ಜೋಷ್​ನಲ್ಲಿ ಶೂಟಿಂಗ್​ ಮಾಡಿಕೊಳ್ಳುತ್ತಿದೆ. ರಂಜಿತ್​ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಬಂಡವಾಳ ಹೂಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net