ಸತ್ಯ ಪಿಕ್ಚರ್ಸ್​ ಚಾನಲ್​ನಲ್ಲಿ ಬಿಡುಗಡೆಯಾಯ್ತು 'ಬ್ಲಾಕ್​ ಅಂಡ್​ ವೈಟ್​' …

Black and White
Published on

ಬೆಂಗಳೂರು: 'ರಾಮ ರಾಮಾ ರೇ' ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್​, ಕೆಲವು ದಿನಗಳ ಹಿಂದೆ ಯೂಟ್ಯೂಬ್​ನಲ್ಲಿ ಸತ್ಯ ಪಿಕ್ಚರ್ಸ್​ ಎಂಬ ಹೊಸ ಚಾನಲ್​ ಪ್ರಾರಂಭಿಸಿದ್ದರು. ಈ ಚಾನಲ್​ನಲ್ಲಿ ಒಂದಿಷ್ಟು ಹೊಸ ತರಹ ಪ್ರಯೋಗಗಳನ್ನು ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಸತ್ಯ ಪಿಕ್ಚರ್ಸ್​ ಚಾನಲ್​ನಲ್ಲಿ ಮೂರು ಎಪಿಸೋಡುಗಳ ಒಂದು ವೆಬ್​ ಸರಣಿಯೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ.

'ವೈಟ್​ ಅಂಡ್​ ಬ್ಲಾಕ್​' ಎಂಬ ಈ ವೆಬ್​ ಸರಣಿಯು ಒಂದು ಕ್ರೈಂ ಥ್ರಿಲ್ಲರ್​ ಆಗಿದ್ದು, ಅಭಿನಂದನ್​ ನಿರ್ದೇಶನ ಮಾಡಿದ್ದಾರೆ. ಜೋಗೇಶ್ ಫಿಲಂಸ್ ಬ್ಯಾನರ್​ನಲ್ಲಿ ಈ ವೆಬ್​ ಸರಣಿ ನಿರ್ಮಾಣವಾಗಿದ್ದು, ಇದರಲ್ಲಿ ಹೊಸಬರೇ ತುಂಬಿದ್ದಾರೆ. ಅದರಲ್ಲೂ ರಂಗಭೂಮಿಯ ಸಾಕಷ್ಟು ಪ್ರತಿಭೆಗಳು ಇಲ್ಲಿವೆ. 'ಸತ್ಯ' ಸೀರಿಯಲ್ ಬಾಲಾ ಪಾತ್ರಧಾರಿ ಶಶಿ ರಾಜ್, ಪ್ರಿಯಾಂಕ ಪ್ರಕಾಶ್, ಚನ್ನಕೇಶವ ಜಿ, ಸವಿತ NSD ಒಳಗೊಂಡ ತಾರಾಗಣ ಈ ವೆಬ್​ ಸೀರೀಸ್​ನಲ್ಲಿದೆ.

ಈ ಹಿಂದೆ ಕೆಲವು ನಾಟಕಗಳಿಗೆ ಕಥೆ ಬರೆದು ನಿರ್ದೇಶನ ಮಾಡಿರುವ ಅಭಿನಂದನ್​, 'ಬ್ಲಾಕ್​ ಅಂಡ್​ ವೈಟ್​'ಗೆ ತಾವೇ ಕಥೆ ಬರೆದಿದ್ದಾರೆ. ಕಮಲ್ ವಿ ಛಾಯಾಗ್ರಹಣ, ಸತ್ಯ ರಾಧಕೃಷ್ಣ ಸಂಗೀತ ನಿರ್ದೇಶನವಿರುವ ಈ ಸರಣಿಯನ್ನು ಚಿತ್ರದುರ್ಗದ ಸಿದ್ದಯ್ಯ ಜೋಗೇಶ್ ನಿರ್ಮಾಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net