'ಎಕ್ಸ್​​​ಕ್ಯೂಸ್​ ಮಿ ಕೇಳಿ ನನ್ನ ಲೆಕ್ಚರು …'; 'ಜಸ್ಟ್​ ಪಾಸ್​' ಚಿತ್ರಕ್ಕೆ ಶರಣ್​ ಹಾಡು

Sharan Sings for Just Pass
Published on

ಬೆಂಗಳೂರು: ಶರಣ್​​ ನಟನಾಗಿಯಷ್ಟೇ ಅಲ್ಲ, ಗಾಯಕನಾಗಿಯೂ ಜನಪ್ರಿಯ. ಈಗಾಗಲೇ ಕೆಲವು ಜನಪ್ರಿಯ ಹಾಡುಗಳನ್ನು ಹಾಡಿರುವ ಶರಣ್​, ಈಗ ಬಹಳ ದಿನಗಳ ನಂತರ 'ಜಸ್ಟ್​ ಪಾಸ್​' ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.

ಸದ್ಯ ಕೆ.ಎಂ.ರಘು ನಿರ್ದೇಶನದ 'ಜಸ್ಟ್ ಪಾಸ್' ಚಿತ್ರಕ್ಕಾಗಿ ವಿ.ನಾಗೇಂದ್ರ ಪ್ರಸಾದ್ ಬರೆದಿರುವ 'ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು ...' ಎಂಬ ಹಾಡನ್ನು ಶರಣ್​ ಹಾಡಿದ್ದಾರೆ. ಹರ್ಷವರ್ಧನ್​ ರಾಜ್​ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ಸಾಧು ಕೋಕಿಲ ನಟಿಸಿದ್ದಾರೆ.

ರಾಯ್ಸ್ ಎಂಟರ್ ಟೈನ್​ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಎಂ.ರಘು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸುಜಯ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.

'ಜಸ್ಟ್​ ಪಾಸ್​' ಆಗುವ ವಿದ್ಯಾರ್ಥಿಗಳ ಕುರಿತಾದ ಈ ಚಿತ್ರದಲ್ಲಿ ಶ್ರೀ ಮಹದೇವ್​ ನಾಯಕನಾಗಿ ಅಭಿನಯಿಸಿದರೆ, ಪ್ರಣತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ (ಕಾಂತಾರ), ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net