

ಮುಂಬೈ: ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಪುತ್ರಿಯಾದ ಜಾಹ್ನವಿ ಕಪೂರ್ ದಡಕ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಮೊದಲ ಚಿತ್ರದಲ್ಲಿ ಯಶಸ್ಸು ಗಳಿಸಿದ ಜಾಹ್ನವಿ ಇಂದು ಬಿಟೌನ್ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಅಲ್ಲದೆ, ಇತರೆ ಚಿತ್ರರಂಗದಿಂದಲೂ ಜಾಹ್ನವಿಗೆ ಸಿನಿಮಾ ಆಫರ್ಗಳು ಹರಿದುಬರುತ್ತಿವೆ.
ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಜಾಹ್ನವಿ, ಇತ್ತೀಚೆಗಷ್ಟೇ ಒಂದಿಷ್ಟು ಹೊಸ ಫೋಟೋಗ್ರಾಫ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೀಚ್ನಲ್ಲಿ ಬಿಕಿನಿ ಉಡುಗೆಯಲ್ಲಿ ಜಾಹ್ನವಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸದ್ಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರಲ್ಲೊಂದು ಫೋಟೋ ನೆಟ್ಟಿಗರ ಹುಬ್ಬೇರಿಸಿದೆ.
ಹುಬ್ಬೇರಿಸಿರುವ ಫೋಟೋದಲ್ಲಿ ಜಾಹ್ನವಿ ಬಿಕಿನಿ ಉಡುಗೆಯಲ್ಲಿ ನಿಗೂಢ ವ್ಯಕ್ತಿಯೊಬ್ಬರ ಕೈಹಿಡಿದು ಕ್ಯಾಮೆರಾಗೆ ಬೆನ್ನು ಮಾಡಿ ಓಡುತ್ತಿದ್ದಾರೆ. ಇದೀಗ ಫೋಟೋದಲ್ಲಿರುವ ಆ ನಿಗೂಢ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ನೆಟ್ಟಿಗರು ಉತ್ತರ ಹುಡುಕುತ್ತಿದ್ದಾರೆ.
ಅಂದಹಾಗೆ ಫೋಟೋದಲ್ಲಿರುವ ನಿಗೂಢ ವ್ಯಕ್ತಿಯ ಹೆಸರು ಒರ್ಹಾನ್ ಅವತ್ರಾಮಣಿ. ಈತ ಜಾಹ್ನವಿ ಸ್ನೇಹಿತ. ಇಬ್ಬರು ಕೈಹಿಡಿದುಕೊಂಡು ಸೂರ್ಯಾಸ್ತದ ಕಡೆ ಓಡುತ್ತಿರುವ ಫೋಟೋ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಜಾಹ್ನವಿ ಕಪೂರ್ ಕೊನೆಯದಾಗಿ ಹಾರ್ದಿಕ್ ಮೆಹ್ತಾ ನಿರ್ದೇಶನದ ಹಾರರ್-ಕಾಮಿಡಿ ಚಿತ್ರ ರೂಹಿಯಲ್ಲಿ ಕಾಣಿಸಿಕೊಂಡರು. ಮುಂದೆ ಜಾಹ್ನವಿ ಗುಡ್ ಲಕ್ ಜೆರ್ರಿ, ದೊಸ್ತಾನಾ 2 ಮತ್ತು ತಾಖತ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)