

BIGG BOSS : ಕನ್ನಡ ಬಿಗ್ಬಾಸ್ ಕಾರ್ಯಕ್ರಮದ 12ನೇ ಸೀಸನ್ ಯಾವಾಗ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ವೇಳೆಗೆ ಆ.31ರಂದು ಬಿಗ್ಬಾಸ್ ಲೋಗೋ ಬಿಡುಗಡೆ ಮಾಡಿದ್ದರು. ಇದೀಗ ಕಿಚ್ಚ ಸುದೀಪ್ ಹುಟ್ಟು ಹಬ್ಬದಂದೇ(ಸೆ.31) ಪ್ರೋಮೋ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಕಲರ್ಸ್ ಕನ್ನಡ ಟಿವಿ ವಾಹಿನಿ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಿಗ್ಬಾಸ್ ಸೀಸನ್-12ರ ಪ್ರೋಮೋ ಹಂಚಿಕೊಂಡಿದೆ.
ಕರ್ನಾಟಕದ ವಿವಿಧ ಭಾಗದ ಆಚರಣೆ ಮತ್ತು ಗ್ರಾಮೀಣ ಭಾಗದ ಸೋಬಗನ್ನು ಒಂದಿಷ್ಟು ತುಣುಕುಗಳನ್ನು ತೋರಿಸುತ್ತಾ ಕಿಚ್ಚನನ್ನು ಅದ್ದೂರಿಯಾಗಿ ತೋರಿಸಿದ್ದಾರೆ. ಅಲ್ಲದೆ, ಪ್ರೀತಿಯ ಕನ್ನಡಿಗರಿಗೆ ಸ್ವಾಗತ ಎಂದೆ ಹೇಳುವ ಕಿಚ್ಚ, ಕಾಫಿ ಕುಡಿಯುತ್ತಾ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡು ಶೋಗೆ ನಾನು.. ರೆಡಿ ಎಂದು ಹೇಳಿದ್ದಾರೆ.
ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಇನ್ನೂ ಈ ಕಾರ್ಯಕ್ರಮಕ್ಕೆ ಸುದೀಪ್ ಕೂಡ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಕಿಚ್ಚ, ನಾನು ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ ಎಂದಿದ್ದರು. ಅದರಂತೆ ಇದೀಗ ಪ್ರೋಮೊದಲ್ಲಿ ಕೂಡ ಇದೇ ಸೆ.28ರಂದು ಗ್ರ್ಯಾಂಡ್ ಓಪೆನ್ ಎಂದು ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ.