ಪರ್​ ಅಬ್​ ಸೀನ್​ ಪಲ್ಟೇಗಾ ... 'ಬಿಗ್​ ಬಾಸ್' ಪ್ರೋಮೋ ಬಂತು

Big Boss - Final
Published on

ಕರೊನಾ ಮತ್ತು ಲಾಕ್​ಡೌನ್​ನಿಂದ ಕಿರುತೆರೆಯ ರಿಯಾಲಿಟಿ ಶೋಗಳೆಲ್ಲಾ ಶುರುವಾಗುವುದೇ ಸಂಶಯ ಎಂಬ ವಾತಾವಾರಣವಿರುವಾಗ, ಮೊದಲು 'ದಿ ಕಪಿಲ್​ ಶರ್ಮಾ ಶೋ' ಶುರುವಾಯ್ತು. ಈಗ 'ಬಿಗ್​ ಬಾಸ್​'ನ 14ನೇ ಸೀಸನ್​ ಶುರುವಾಗುವುದಕ್ಕೆ ವೇದಿಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಪ್ರೋಮೋ ಬಿಡುಗಡೆಯಾಗಿದೆ.

ಭಾನುವಾರ ಈ ಕಾರ್ಯಕ್ರಮದ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಈ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ಅವರು ತಮ್ಮ ಪನ್ವೇಲ್​ನ ಫಾರ್ಮ್​ಹೌಸ್​ನಲ್ಲಿ ಕೃಷಿ ಮಾಡುವುದನ್ನು ನೋಡಬಹುದಾಗಿದೆ. 'ಲಾಕ್​ಡೌನ್​ನಿಂದ ಲೈಫ್​ಗೆ ಬಿತತು ಸ್ಪೀಡ್​ ಬ್ರೇಕರ್​. ಹಾಗಾಗಿ ಓಡಿಸಬೇಕಾಯ್ತು ಟ್ರಾಕ್ಟರ್​. ಪರ್​ ಅಬ್​ ಸೀನ್​ ಪಲ್ಟೇಗಾ ...' ಎಂದು ಸಲ್ಮಾನ್​ ಹೇಳುವ ಪ್ರೋಮೋ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ.

ಸಲ್ಮಾನ್​ ಖಾನ್​ 'ಬಿಗ್​ ಬಾಸ್​' ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಇದಕ್ಕೂ ಮುನ್ನ, ಅಂದರೆ ಕಳೆದ ಸೀಸನ್​ನಲ್ಲಿ ವಾರಕ್ಕೆ 12ರಿಂದ 14 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಈ ಬಾರಿ, ಅದನ್ನು ಇನ್ನಷ್ಟು ಏರಿಸಿರುವ ಅವರು, ವಾರಕ್ಕೆ 16 ಕೋಟಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಈಗಾಗಲೇ ಆನ್​ಲೈನ್​ ಮೂಲಕ ಆಡಿಷನ್​ಗಳನ್ನು ನಡೆಸಲಾಗುತ್ತಿದ್ದು, 16 ಜನರ ಪೈಕಿ 13 ಸೆಲೆಬ್ರಿಟಿಗಳಿದ್ದರೆ, ಮೂರು ಜನ ಸಾಮಾನ್ಯರು ಇರಲಿದ್ದಾರಂತೆ. ಈಗಾಗಲೃ 'ನಾಗಿನ್​ 4' ಖ್ಯಾತಿಯ ಜಾಸ್ಮಿನ್​ ಭಾಸಿನ್​, ಆಕಾಂಕ್ಷ ಪುರಿ ಮುಂತಾದವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net