

ಬೆಂಗಳೂರು: ರಾತ್ರಿ ಬೆಳಗಾಗುಷ್ಟರಲ್ಲಿ ಟಿಕ್ಟಾಕ್ ಸ್ಟಾರ್ ಆಗಿ ಬದಲಾಗಿಬಿಟ್ಟ ಧನುಶ್ರೀಗೆ ಈ ವರ್ಷ ಅದೃಷ್ಟ ಒಲಿದಿರುವುದಂತು ಗ್ಯಾರಂಟಿ. ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಆದ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡು, ಇದೀಗ ಅದರಿಂದ ಹೊರಬಿದ್ದಿರುವ ಧನುಶ್ರೀಗೆ ಮತ್ತೊಂದು ದೊಡ್ಡ ಚಾನ್ಸ್ ಸಿಕ್ಕಿದೆ.
ಹೌದು! ಬರೀ ಟಿಕ್ಟಾಕ್ನಲ್ಲಿ ಕಾಣಿಸಿಕೊಂಡು ಎಲ್ಲರ ಮನಸ್ಸು ಗೆದ್ದಿರುವ ಧನುಶ್ರೀ ಸ್ಯಾಂಡಲ್ವುಡ್ಗೆ ಎಂಟರ್ ಆಗಲು ಸಿದ್ಧವಾಗಿದ್ದಾರೆ. ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಧನುಶ್ರೀ ಸಹಿ ಹಾಕಿದ್ದಾರಂತೆ. ಅದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದ್ದು, ಧನುಶ್ರೀಗೆ ತುಂಬಾ ಹತ್ತಿರವಾಗುವಂತಹ ಸಿನಿಮಾವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸುವ ಹಂತಕ್ಕೆ ಬಂದಿರುವ ಚಿತ್ರತಂಡ, ಕೆಲ ದಿನಗಳಲ್ಲಿ ಶೂಟಿಂಗ್ ಆರಂಭಿಸಲಿದೆ ಎನ್ನಲಾಗಿದೆ. ಈ ಕುರಿತಾಗಿ ಧನುಶ್ರೀ ಕೂಡ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ‘Something new coming up’ ಎಂದು ಒಂದು ತಂಡದೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಟಿಕ್ಟಾಕ್ನಲ್ಲಿ ಗೆದ್ದಿರುವ ಧನುಶ್ರೀ ಬಿಗ್ಬಾಸ್ನಲ್ಲಿ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ಇದೀಗ ಸಿನಿಮಾ ಮೂಲಕ ಮೋಡಿ ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ