ನವದೆಹಲಿ: ಕರೊನಾ ಪಿಡುಗು ವಿಶ್ವವ್ಯಾಪಿಯಾಗಿರುವ ಎಲ್ಲೆಡೆ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ವಿಶ್ವವಿದ್ಯಾಲಯಗಳು ಆಯೋಜಿಸುವ ಘಟಿಕೋತ್ಸವಗಳಿಗೂ ಲಾಕ್ಡೌನ್ ಅನ್ವಯವಾಗುವುದರಿಂದ, ಆ ಕಾರ್ಯಕ್ರಮಗಳು ಕೂಡ ಸ್ಥಗಿತಗೊಂಡಿವೆ. ಹೀಗಿದ್ದೂ ಬಿಗ್ಬಿ ಎಂದೇ ಖ್ಯಾತರಾದ ಬಾಲಿವುಡ್ನ ಶೆಹನ್ಷಾ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಘಟಿಕೋತ್ಸವದ ಸಂಭ್ರಮ ಆಚರಿಸಿದ್ದಾರೆ!
ಹೌದು, ಬಿಗ್ಬಿ ಮೊಮ್ಮಗಳು ಅಂದರೆ ಅಮಿತಾಭ್ ಬಚ್ಚನ್ ಅವರ ಹಿರಿಯ ಪುತ್ರಿ ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಅವರ ಪುತ್ರಿ ನವ್ಯಾ ನವೇಲಿ ನಂದಾ ಅಮೆರಿಕದ ನ್ಯೂಯಾರ್ಕ್ನ ಫೋರ್ಡ್ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ ವಿಶ್ವವಿದ್ಯಾಲಯದ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಘಟಿಕೋತ್ಸವವನ್ನು ರದ್ದುಗೊಳಿಸಿತ್ತು.

ಆದರೆ, ಪದವೀಧರರಾದ ತಮ್ಮ ಸಂಭ್ರಮದ ಕ್ಷಣವನ್ನು ಮಿಸ್ ಮಾಡಿಕೊಳ್ಳದಿರಲು ನವ್ಯಾ ನಿರ್ಧರಿಸಿದರು. ಇದಕ್ಕಾಗಿ ಬಿಗ್ಬಿ ಅವರ ಟೇಲರ್ ಸಹಾಯದಿಂದ ಘಟಿಕೋತ್ಸವದ ಗೌನ್ ಮತ್ತು ಹ್ಯಾಟ್ ಅನ್ನು ಸಿದ್ಧಪಡಿಸಿಕೊಂಡರು.
ಬಳಿಕ ಅದನ್ನು ಧರಿಸಿ, ಮುಂಬೈನಲ್ಲಿರುವ ಬಿಗ್ಬಿ ಬಂಗ್ಲೆ ಜಲ್ಸಾದ ಉದ್ಯಾನದಲ್ಲಿ ಕುಣಿದು ಕುಪ್ಪಳಿಸಿ, ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ಘಟಿಕೋತ್ಸವದ ಸಂಭ್ರಮ ಆಚರಿಸಿದರು. ಆಕೆಯ ಸಂಭ್ರಮವನ್ನು ಬಿಗ್ಬಿ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಹೆಮ್ಮೆಯಿಂದ ಕಣ್ತುಂಬಿಕೊಂಡರು. ಬಳಿಕ ಟ್ವಿಟರ್ನಲ್ಲಿ ಆಕೆಯ ಸಂತಸವನ್ನು ಹಂಚಿಕೊಂಡರು.
ಮೊಮ್ಮಗಳು ನವ್ಯಾ.. ಯುವ ವಿದ್ಯಾರ್ಥಿನಿಯ ಜೀವನದ ಮಹತ್ವದ ಘಟ್ಟ ಘಟಿಕೋತ್ಸವ, ನ್ಯೂಯಾರ್ಕ್ನ ಕಾಲೇಜಿನಲ್ಲಿ ಆಕೆ ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದಾಳೆ... ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಘಟಿಕೋತ್ಸವ ಕಾರ್ಯಕ್ರಮ ರದ್ದಾಗಿತ್ತು... ಹಾಗಾಗಿ ಕಾರ್ಯಕ್ರಮವನ್ನು ಆಕೆ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಳು... ಈ ಸಂದರ್ಭದಲ್ಲಿ ನಾವೆಲ್ಲರೂ ಅಮೆರಿಕಕ್ಕೆ ತೆರಳಿ ಆಕೆಯ ಸಂಭ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದೆವು... ಆದರೆ... ಆಕೆಯ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾದ ಘಟಿಕೋತ್ಸವದ ಗೌನ್ ಮತ್ತು ಹ್ಯಾಟ್ ಧರಿಸಲು ಬಯಸಿದಳು... ಹಾಗಾಗಿ ನಮ್ಮ ಸಿಬ್ಬಂದಿ ಗೌನ್ ಮತ್ತು ಹ್ಯಾಟ್ ಅನ್ನು ಸಿದ್ಧಪಡಿಸಿಕೊಟ್ಟರು... ಅದನ್ನು ಧರಿಸಿದ ಆಕೆ ಜಲ್ಸಾದಲ್ಲಿ ಸಂಭ್ರಮಿಸಿದಳು... ನವ್ಯಾ ನಿನ್ನ ಸಾಧನೆ ಹೆಮ್ಮೆಯುಂಟು ಮಾಡುತ್ತಿದೆ... ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ... ಅಮೋಘವಾದ ಸಕಾರಾತ್ಮಕ ಮತ್ತು ಸಂತೋಷದ ಮನೋಭಾವ... ಎಂದು ಬಿಗ್ಬಿ ಟ್ವೀಟ್ ಮಾಡಿದ್ದಾರೆ.