ಹುಟ್ಟಿದ ದಿನದಂದೇ ನಿಧನರಾದ ಹಿರಿಯ ನಿರ್ದೇಶಕ ಭಗವಾನ್​

Bhagawan (1)
Published on

ಬೆಂಗಳೂರು: ಕನ್ನಡದಲ್ಲಿ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ದೊರೆ-ಭಗವಾನ್​ ಖ್ಯಾತಿಯ ಭಗವಾನ್​, ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ತಮ್ಮ ಹುಟ್ಟಿದ ದಿನದಂದೇ ನಿಧನರಾಗಿದ್ದು ವಿಪರ್ಯಾಸ.

ಭಗವಾನ್​ ಅವರು ಹುಟ್ಟಿದ್ದು 1929ರ ಫೆಬ್ರವರಿ 20ರಂದು. ಇಂದಿಗೆ 94 ವರ್ಷ ಮುಗಿದು, 95ಕ್ಕೆ ಅವರು ಕಾಲಿಡಬೇಕಿತ್ತು. ಆದರೆ, ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾದ ದಿನದಂದೇ ಅವರು ನಿಧನರಾಗಿದ್ದಾರೆ.

ಈ ಕುರಿತು ಮಾತನಾಡಿರುವ ಅವರ ಹಿರಿಯ ಮಗ ಜ್ಯೋತಿಂದರ್​, 'ಕಳೆದ ಶುಕ್ರವಾರ ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಜಯದೇವ ಆಸ್ಪತ್ರೆಗೆ ಸೇರಿಸಲಾಗಿದ್ದು. ಬುಧವಾರ ಅವರಿಗೆ ಪೇಸ್​ ಮೇಕರ್​ ಅಳವಡಿಸಲಾಗಿತ್ತು. ಭಾನುವಾರ ಮಧ್ಯರಾತ್ರಿ 1.30ಕ್ಕೆ ಇನ್ನೊಂದು ಅಟ್ಯಾಕ್​ ಆಗಿದೆ. ಬೆಳಿಗ್ಗೆ 06:05ರ ಸುಮಾರಿಗೆ ಅವರು ಇನ್ನಿಲ್ಲ ಎಂದು ಗೊತ್ತಾಯಿತು. ಇಂದು ಅವರ ಹುಟ್ಟುಹಬ್ಬವಾಗಿತ್ತು' ಎಂದು ಹೇಳಿದ್ದಾರೆ.

ಭಗವಾನ್​ ಅವರ ಅಂತ್ಯಕ್ರಿಯೆಯನ್ನು ಚಾಮರಾಜಪೇಟೆಯ ಚಿತಾಗಾರದಲ್ಲಿ ಇಂದು ಸಂಜೆ ನೆರವೇರಿಸಲಾಗುವುದು. ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net