More

    ಮಹದೇವನ ನೆನೆದ ಬೆಂಗಳೂರಿನ ‘ಸ್ಟ್ರಾಂಗೆಸ್ಟ್ ವುಮನ್’ ಅಶ್ವಿನಿ

    ಬೆಂಗಳೂರು: ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಬೆಂಗಳೂರಿನ ‘ಸ್ಟ್ರಾಂಗೆಸ್ಟ್ ವುಮನ್’ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಅಶ್ವಿನಿ ಬಸವರಾಜು. ಅವರೀಗ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ‘ದೇವ ದೇವ ಮಹದೇವ’ ಎಂಬ ಜಾನಪದ ಶೈಲಿಯ ಭಕ್ತಿಗೀತೆಗೆ ದನಿಯಾಗಿದ್ದಾರೆ. ಆ ಹಾಡು ಮಹಾಶಿವರಾತ್ರಿ ಅಂಗವಾಗಿ ಶನಿವಾರ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಮತ್ತೊಮ್ಮೆ ‘ಭೈರತಿ ರಣಗಲ್’ ಆದ ಶಿವರಾಜಕುಮಾರ್​, ಸದ್ಯದಲ್ಲೇ ಚಿತ್ರ ಪ್ರಾರಂಭ

    ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಮತ್ತು ಮೆಡಲ್​ಗಳನ್ನು ಪಡೆದಿರುವ ಅಶ್ವಿನಿಗೆ ಚಿಕ್ಕಂದಿನಿಂದಲೂ ಗಾಯಕಿ ಆಗಬೇಕು ಎಂಬ ಆಸೆ ಇತ್ತಂತೆ. ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿ ‘ಮರೆಯುವೆನು ನಿನಗಾಗಿ’ ಎನ್ನುವ ಆಲ್ಬಂ ಹಾಡನ್ನು ಅವರು ಹೊರತಂದಿದ್ದರು.ಚಂದ್ರಕಾಂತ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿರುವ ಅಶ್ವಿನಿ ಬಸವರಾಜು ಈಗ ಜಾನಪದ ಶೈಲಿಯ ‘ದೇವ ದೇವ ಮಹದೇವ’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ಮನಾಲಿಯಲ್ಲಿ ಸತೀಶ್-ಅದಿತಿ: ಮೈನಸ್ 5 ಡಿಗ್ರಿ ಚಳಿಯಲ್ಲಿ ಹಾಡಿನ ಚಿತ್ರೀಕರಣ …

    ಈ ಹಾಡಿಗೆ ಮಯೂರ್ ಅಂಬೆಕಲ್ಲು ಸಂಗೀತ, ಮಯೂರ್ ನೈಗ ಸಾಹಿತ್ಯವಿದೆ. ಮಹದೇಶ್ವರ ಬೆಟ್ಟದಲ್ಲಿ ಈ ವಿಡಿಯೋ ಆಲ್ಬಂ ಅನ್ನು ಚಿತ್ರೀಕರಿಸಲಾಗಿದೆ. ಈ ಹಾಡು ಬಿಡುಗಡೆ ಮಾಡಿ ಮಾತನಾಡಿರುವ ಚಿತ್ರಸಾಹಿತಿ ಡಾ. ವಿ. ನಾಗೇಂದ್ರ, ‘ಭಕ್ತಿಗೀತೆ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ‘ದೇವ ದೇವ ಮಹದೇವ’ ಹಾಡಿನ ಮೂಲಕ ಮಹದೇಶ್ವರನ ಖಂಡಕಾವ್ಯವನ್ನು, ಮಹಾಪುರುಷನ ಇತಿಹಾಸವನ್ನು ಒಂದೇ ಹಿಡಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅಶ್ವಿನಿ ಅವರ ದನಿಯನ್ನು ಕೇಳುತ್ತಿದ್ದರೆ ಅವರಿಗೆ ಉತ್ತಮ ಭವಿಷ್ಯವಿದೆ ಅನ್ನೋದು ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.

    100 ಪ್ಲಸ್​ ನಟ-ನಟಿಯರಿಂದ ಏಕಕಾಲಕ್ಕೆ ಬಿಡುಗಡೆಯಾಯ್ತು ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts