VIDEO|‘ಬೆಲ್​ ಬಾಟಂ’ ಚಿತ್ರದ ಈ ಕಳ್ಳ ವಿಡಿಯೋವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ!!

Bell_Bottom_poster
Published on

ಬೆಂಗಳೂರು: ರಿಷಬ್​ ಶೆಟ್ಟಿ, ಹರಿಪ್ರಿಯಾ ನಟನೆಯ ’ಬೆಲ್​ ಬಾಟಂ‘ ಸಿನಿಮಾ ಕಳೆದ ವರ್ಷ ತೆರೆಕಂಡು ಭರ್ಜರಿ ಶತದಿನೋತ್ಸವ ಆಚರಿಸಿದೆ. 2019ರ ಟಾಪ್​ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗೊತ್ತಿರುವ ವಿಚಾರ. ಇದೀಗ ಇದೇ ಚಿತ್ರ ಮತ್ತೆ ಸುದ್ದಿಯಲ್ಲಿದೆ ಎಂದರೆ ನೀವು ನಂಬಲೇಬೇಕು.

ಹೌದು, ಅದು 2019 ಮಾರ್ಚ್​ 10ರ ಭಾನುವಾರ ರಾತ್ರಿ 9 ಗಂಟೆ ಶೋ. ಬೆಂಗಳೂರಿನ ವೀರೇಶ ಚಿತ್ರಮಂದಿರದಲ್ಲಿ ಬೆಲ್​ಬಾಟಂ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿತ್ತು. ಅದೇ ವೇಳೆ ಕುಟುಂಬದೊಟ್ಟಿಗೆ ಸಿನಿಮಾ ನೋಡೋಕೆ ಸ್ವತಃ ನಿರ್ದೇಶಕ ಜಯತೀರ್ಥ ತೆರಳಿದ್ದರು. ನೇರವಾಗಿ ಬ್ಲಾಕ್​ ಟಿಕೆಟ್​ ಮಾರುತ್ತಿದ್ದ ವ್ಯಕ್ತಿ ಬಳಿ ಹೋಗಿ ಸಿನಿಮಾ ಬಗ್ಗೆ ಮಾತಿಗಿಳಿಸಿದರು. ಆತ ಬಾಲ್ಕನಿ 200, ಬಾಲ್ಕನಿ 200.. ಎಂದು ಮಾತು ಶುರುವಿಟ್ಟುಕೊಂಡ..

‘ಸಿನಿಮಾ ಹೆಂಗೆ ಕಿತ್ಕೊಂಡ್​ ಹೋಗ್ತಿದೆ ಗೊತ್ತ.. ಹೌಸ್​ಫುಲ್​.. ಹೋದವಾರ ಏನೂ ಇರಲಿಲ್ಲ. ಈ ವಾರ ಡಬಲ್​ ಆಗಿದೆ.. ಸುಮ್ಮನೆ ಕೊಚ್ಚು ಕೊಚ್ಚು ಸಿನಿಮಾ ಯಾರ್ ನೋಡ್ತಾರೆ. ಬಾಲ್ಕಿನಿ 200 ರೂ. ಬೇಕಾದ್ರೆ ತಗೊಳಿ.. ಇಲ್ಲಾಂದ್ರೆ ಇಲ್ಲ.. ಇನ್ನು 10 ನಿಮಿಷದಲ್ಲಿ ಎಲ್ಲ ಟಿಕೆಟ್​ ಖಾಲಿ ಮಾಡ್ತಿನಿ ನೋಡಿ..‘ಎಂಬ ಮಾತು ಆತನ ಬಾಯಿಂದ ಹೊರಡುತ್ತಲೇ ಇತ್ತು. ಅದನ್ನು ಅಷ್ಟೇ ಸೌಮ್ಯದಿಂದಲೇ ಆಸ್ವಾದಿಸುತ್ತಿದ್ದರು ಜಯತೀರ್ಥ.

ಅಂದಹಾಗೆ ಈ ವಿಡಿಯೋ ಹಂಚಿಕೊಂಡ ಜಯತೀರ್ಥ, ಅದರ ಆಶಯವನ್ನೂ ಹೇಳಿಕೊಂಡಿದ್ದಾರೆ. ’ಕನ್ನಡದ ಸಿನಿಮಾಗಳಿಗೆ ಮತ್ತೆ ಈ ಥರಹದ ಸಂಭ್ರಮದ ದಿನಗಳು ಬೇಗ ಬರಲಿ ಎಂದು ಆಶಿಸುತ್ತೇನೆ‘ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net